ಕಿವೀಸ್ ಗೆ 398 ರನ್ ಗಳ ಗುರಿ ನೀಡಿದ ಭಾರತ
ವಿರಾಟ್, ಶ್ರೇಯಸ್ ಶತಕ; ಗಿಲ್ ಅರ್ಧ ಶತಕ
Photo : cricketworldcup.com
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ಗೆಲುವಿಗೆ 398 ರನ್ ಗಳ ಬೃಹತ್ ಗುರಿ ನೀಡಿದೆ.
ವಿರಾಟ್ ಕೊಹ್ಲಿ ದಾಖಲೆಯ 50 ನೇ ಶತಕ ಹಾಗೂ ಶ್ರೇಯಸ್ ಐಯ್ಯರ್ ಭರ್ಜರಿ ಆಟ, ಶುಭಮನ್ ಗಿಲ್ ಸ್ಟೋಟಕ ಅರ್ಧಶತಕದ ನೆರವಿನಿಂದ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಭಾರತ ಭರ್ಜರಿ ಆಟ ಪ್ರದರ್ಶಿಸಿತು.
ಕಿವೀಸ್ ವಿರುದ್ಧ ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಬಂದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಪತನಕ್ಕೆ ನಾಯಕ ರೋಹಿತ್ ಶರ್ಮಾ 4 ಬೌಂಡರಿ 4 ಸಿಕ್ಸರ್ ಸಹಿತ ಸ್ಟೋಟಕ 47 ರನ್ ಪೇರಿಸಿದರು. ಶುಭಮನ್ ಗಿಲ್ 8 ಬೌಂಡರಿ 3 ಸಿಕ್ಸರ್ ಸಹಿತ 79 ರನ್ ಗಳಿಸಿ ಗಾಯದ ಸ್ವಯಂ ನಿವೃತ್ತಿ ಹೊಂದಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದ ವಿರಾಟ್ ಕೊಹ್ಲಿ 9 ಬೌಂಡರಿ 2 ಸಿಕ್ಸರ್ ಸಹಿತ 117 ರನ್ ಬಾರಿಸಿ ಏಕದಿನ ಮಾದರಿಯಲ್ಲಿ ಗರಿಷ್ಠ ಶತಕ ದಾಖಲಿಸಿದ ಆಟಗಾರ ಎಂದೆನಿಸಿಕೊಂಡರು.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನ ಮಾದರಿಯಲ್ಲಿ 50 ನೇ ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ 49 ಅತೀ ಹೆಚ್ಚು ಶತಕದ ದಾಖಲೆ ಮುರಿದರು.
ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದ ಶ್ರೇಯಸ್ ಐಯ್ಯರ್ 4 ಬೌಂಡರಿ 8 ಸಿಕ್ಸರ್ ಸಹಿತ 150 ಸ್ಟೈಕ್ ರೇಟ್ ನಲ್ಲಿ 105 ರನ್ ಪೇರಿಸಿ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರು. ಕಡೇ ಗಳಿಗೆಯಲ್ಲಿ ಬ್ಯಾಟಿಂಗ್ ಮಾಡಿದ ಕೆ ಎಲ್ ರಾಹುಲ್ 39 ರನ್ ಗಳಿದರೆ , ಸೂರ್ಯಕುಮಾರ್ ಯಾದವ್ 1 ರನ್ ಗೆ ಸೌಥಿ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಗಾಯದ ಸ್ವಯಂ ನಿವೃತ್ತಿ ಹೊಂದಿದ್ದ ಗಿಲ್ ಕೊನೆ ಓವರ್ ನಲ್ಲಿ 1 ರನ್ ಗಳಿಸಿದರು.
ನ್ಯೂಝಿಲ್ಯಾಂಡ್ ಪರ ಟಿಮ್ ಸೌಥಿ 3 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಕಬಳಿಸಿದರು.