ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಾರತ
Photo: PTI
ಹ್ಯಾಂಗ್ ಝೌ: ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಪುರುಷರ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪ್ರಪ್ರಥಮ ಬಾರಿಗೆ ಚಿನ್ನದ ಪದಕ ಜಯಿಸುವ ಮೂಲಕ ಭಾರತ ತಂಡವು ಇತಿಹಾಸ ನಿರ್ಮಿಸಿತು.
ಭಾರತೀಯ ಜೋಡಿಗಳಾದ ಸ್ವಸ್ತಿಕ್ ಸಾಯಿ ರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಚೋಯಿ ಸಾಲ್-ಗ್ಯು ಹಾಗೂ ಕಿಮ್ ವೊನ್-ಹೊ ವಿರುದ್ಧ 21-18, 21-16 ಅಂತರದಲ್ಲಿ ಜಯಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿತು.
19ನೇ ಏಶ್ಯನ್ ಗೇಮ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತವು ಜಯಿಸಿರುವ ಮೂರನೆಯ ಪದಕ ಇದಾಗಿದೆ.
Next Story