13 ವರ್ಷಗಳ ನಂತರ ಅಂತಿಮ-16ರ ಸುತ್ತಿಗೆ ಅರ್ಹತೆ ಪಡೆದ ಭಾರತದ ಪುರುಷರ ಫುಟ್ಬಾಲ್ ತಂಡ
ಸುನೀಲ್ ಚೆಟ್ರಿ| Photo: X
ಹಾಂಗ್ಝೌ: ಭಾರತದ ಪುರುಷರ ಫುಟ್ಬಾಲ್ ತಂಡ 13 ವರ್ಷಗಳ ನಂತರ ಏಶ್ಯನ್ ಗೇಮ್ಸ್ನಲ್ಲಿ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದೆ.
ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯದ ಮೊದಲಾರ್ಧದಲ್ಲಿ ಪೆನಾಲ್ಟಿ ಕಾರ್ನರ್ರನ್ನು ಗೋಲಾಗಿ ಪರಿವರ್ತಿಸಿದ ಸುನೀಲ್ ಚೆಟ್ರಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಸ್ಫೂರ್ತಿಯುತ ಪ್ರದರ್ಶನ ನೀಡಿದ ಮ್ಯಾನ್ಮಾರ್ 1-1ರಿಂದ ಡ್ರಾಗೊಳಿಸಿತು.
ಮ್ಯಾನ್ಮಾರ್ ವಿರುದ್ಧ ಫಲಿತಾಂಶದೊಂದಿಗೆ ಭಾರತವು ಚೀನಾ ನಂತರ 2ನೇ ಸ್ಥಾನ ಪಡೆದು ಅಂತಿಮ-16ರ ಸುತ್ತಿಗೆ ತಲುಪಿದೆ.
ಭಾರತವು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸೌದಿ ಅರೇಬಿಯ ತಂಡವನ್ನು ಎದುರಿಸಲಿದೆ.
Next Story