ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಕ್ಕೆ ಭಾರತದ ಪುರುಷರ ಹಾಕಿ ತಂಡ ಪಯಣ
Photo: ANI
ಹೊಸದಿಲ್ಲಿ : ಜುಲೈ-ಆಗಸ್ಟ್ ನಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಗಿಂತ ಮೊದಲು ನಿರ್ಣಾಯಕವಾಗಿರುವ, ಎಪ್ರಿಲ್ 6ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪರ್ಧಿಸಲು ಭಾರತೀಯ ಪುರುಷರ ಹಾಕಿ ತಂಡ ಆಸ್ಟೇಲಿಯಕ್ಕೆ ಪ್ರಯಾಣ ಬೆಳೆಸಿದೆ.
ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ಭಾರತದ ಹಾಕಿ ತಂಡವು ಸೋಮವಾರ ರಾತ್ರಿ ಆಸ್ಟ್ರೇಲಿಯಕ್ಕೆ ತೆರಳಿದೆ. ಪ್ರಸ್ತುತ ಉತ್ತಮ ಫಾರ್ಮ್ನಲ್ಲಿರುವ ಭಾರತ ತಂಡವು ಇತ್ತೀಚೆಗೆ ಭುವನೇಶ್ವರದಲ್ಲಿ ನಡೆದಿದ್ದ ಎಫ್ಐಎಚ್ ಲೀಗ್ ನಲ್ಲಿ ಆಡಿರುವ 4 ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿತ್ತು.
ಎಪ್ರಿಲ್ 6ರಂದು ಆರಂಭಿಕ ಪಂದ್ಯ ನಡೆದ ನಂತರ ಸರಣಿಯ ಉಳಿದ ಪಂದ್ಯಗಳು ಎಪ್ರಿಲ್ 7,10, 12 ಹಾಗೂ 13ರಂದು ನಡೆಯುಲಿದೆ.
ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಗೆ ಭಾರತೀಯ ಹಾಕಿ ತಂಡವು ತನ್ನ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳಲು, ತಮ್ಮ ಶಕ್ತಿಯನ್ನು ಅವಲೋಕಿಸಲು, ಕೆಲವು ವಿಭಾಗಗಳಲ್ಲಿ ಸುಧಾರಣೆ ಕಾಣಲು ಈ ಸರಣಿಯು ಉತ್ತಮ ಅವಕಾಶವಾಗಿದೆ ಎಂದು ಹಾಕಿ ಇಂಡಿಯಾ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಭಾರತೀಯ ಹಾಕಿ ತಂಡ
ಗೋಲ್ಕೀಪರ್ ಗಳು: ಕೃಷ್ಣ ಬಹದ್ದೂರ್ ಪಾಠಕ್, ಪಿ.ಆರ್.ಶ್ರೀಜೇಶ್, ಸೂರಜ್ ಕರ್ಕೇರ.
ಡಿಫೆಂಡರ್ಗಳು: ಹರ್ಮನ್ಪ್ರೀತ್ ಸಿಂಗ್(ನಾಯಕ), ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಸಂಜಯ್, ಸುಮಿತ್, ಆಮಿರ್ ಅಲಿ.
ಮಿಡ್ ಫೀಲ್ಡರ್ ಗಳು: ಮನ್ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್(ಉಪ ನಾಯಕ), ವಿವೇಕ್ ಸಾಗರ್ ಪ್ರಸಾದ್, ಶಂಶೇರ್ ಸಿಂಗ್, ನೀಲಕಂಠ ಶರ್ಮಾ, ರಾಜ್ಕುಮಾರ್ ಪಾಲ್, ವಿಷ್ಣುಕಾಂತ್ ಸಿಂಗ್.
ಫಾರ್ವರ್ ಗಳು: ಆಕಾಶ್ದೀಪ್ ಸಿಂಗ್, ಮನ್ದೀಪ್ ಸಿಂಗ್. ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ದಿಲ್ಪ್ರೀತ್ ಸಿಂಗ್, ಸುಖಜೀತ್ ಸಿಂಗ್, ಗುರ್ಜಂತ್ ಸಿಂಗ್, ಮುಹಮ್ಮದ್ ರಹೀಲ್ ಮೌಸೀನ್, ಬಾಬಿ ಸಿಂಗ್, ಅರೈಜೀತ್ ಸಿಂಗ್.