2025ರ ಋತುವಿನ ಭಾರತದ ತವರು ಪಂದ್ಯಗಳ ವೇಳಾಪಟ್ಟಿ ಬಿಡುಗಡೆ

PC : BCCI
ಮುಂಬೈ: 2025ರ ಋತುವಿನಲ್ಲಿ ಸ್ವದೇಶದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಬಿಡುಗಡೆಗೊಳಿಸಿದೆ.
ಈ ಅವಧಿಯಲ್ಲಿ ಟೀಮ್ ಇಂಡಿಯಾವು ವಿದೇಶಿ ತಂಡಗಳ ವಿರುದ್ಧ ಟೆಸ್ಟ್ ಪಂದ್ಯಗಳು, ಏಕದಿನ ಪಂದ್ಯಗಳು ಮತ್ತು ಟಿ20 ಪಂದ್ಯಗಳನ್ನು ಆಡಲಿದ್ದು, ಪ್ರೇಕ್ಷಕರು ಕ್ರಿಕೆಟ್ ರಸದೌತಣ ಸವಿಯಲಿದ್ದಾರೆ.
ಟೀಮ್ ಇಂಡಿಯಾದ ತವರಿನ ಕ್ರಿಕೆಟ್ ಋತು ಅಕ್ಟೋಬರ್ 2ರಂದು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯೊಂದಿಗೆ ಆರಂಭಗೊಳ್ಳಲಿದೆ.
ಬಳಿಕ ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸವು ಎಲ್ಲಾ ಕ್ರಿಕೆಟ್ ಮಾದರಿಗಳನ್ನು ಒಳಗೊಳ್ಳಲಿದೆ. ಪ್ರವಾಸವು ನವೆಂಬರ್ 14ರಂದು ಟೆಸ್ಟ್ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ.
ವೇಳಾಪಟ್ಟಿ:
►ವೆಸ್ಟ್ ಇಂಡೀಸ್ ಪ್ರವಾಸ
ಮೊದಲ ಟೆಸ್ಟ್: ಅಕ್ಟೋಬರ್ 2-6, ಅಹ್ಮದಾಬಾದ್
ದ್ವಿತೀಯ ಟೆಸ್ಟ್: ಅಕ್ಟೋಬರ್ 10-14, ಕೋಲ್ಕತಾ
►ದಕ್ಷಿಣ ಆಫ್ರಿಕಾ ಪ್ರವಾಸ
ಟೆಸ್ಟ್ ಸರಣಿ
ಮೊದಲ ಟೆಸ್ಟ್: ನವೆಂಬರ್ 14-18, ಹೊಸದಿಲ್ಲಿ
ದ್ವಿತೀಯ ಟೆಸ್ಟ್: ನವೆಂಬರ್ 22-26, ಗುವಾಹಟಿ
ಏಕದಿನ ಸರಣಿ
ಮೊದಲ ಪಂದ್ಯ: ನವೆಂಬರ್ 30, ರಾಂಚಿ
ದ್ವಿತೀಯ ಪಂದ್ಯ: ಡಿಸೆಂಬರ್ 3, ರಾಯ್ಪುರ
ತೃತೀಯ ಪಂದ್ಯ: ಡಿಸೆಂಬರ್ 6, ವಿಶಾಖಪಟ್ಟಣಮ್
ಟಿ20 ಸರಣಿ
ಪ್ರಥಮ ಟಿ20: ಡಿಸೆಂಬರ್ 9, ಕಟಕ್
ದ್ವಿತೀಯ ಟಿ20: ಡಿಸೆಂಬರ್ 11, ನ್ಯೂ ಚಂಡೀಗಢ
ತೃತೀಯ ಟಿ20: ಡಿಸೆಂಬರ್ 14, ಧರ್ಮಶಾಲೆ
4ನೇ ಟಿ20: ಡಿಸೆಂಬರ್ 17, ಲಕ್ನೋ
5ನೇ ಟಿ20: ಡಿಸೆಂಬರ್ 19, ಅಹ್ಮದಾಬಾದ್