ನವೆಂಬರ್-ಡಿಸೆಂಬರ್‌ನಲ್ಲಿ ಐಪಿಎಲ್ 2025ರ ಮೆಗಾ ಹರಾಜು?
ಹೊಸದಿಲ್ಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2025ರ ಐಪಿಎಲ್‌ಗಾಗಿ ಮೆಗಾ ಹರಾಜು ಪ್ರಕ್ರಿಯೆಯನ್ನು ವಿದೇಶದಲ್ಲಿ ನಡೆಸಲು ಯೋಜಿಸುತ್ತಿದ್ದು, ಯುಎಇಯ ಅಬುಧಾಬಿ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಮಸ್ಕತ್ ಹಾಗೂ ದೋಹಾವನ್ನು ಪರಿಗಣಿಸಬಹುದು.
ಹರಾಜು ಪ್ರಕ್ರಿಯೆಯ ದಿನಾಂಕ ಇನ್ನಷ್ಟೇ ಅಂತಿಮವಾಗಬೇಕಾಗಿದೆ. ನವೆಂಬರ್‌ನ ಎರಡನೇ ವಾರ ಅಥವಾ ಡಿಸೆಂಬರ್‌ನ ಮೂರನೇ ವಾರ ಹರಾಜು ನಡೆಯಬಹುದು ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಜಯ್ ಶಾ ಡಿಸೆಂಬರ್ 1ರಂದು ಐಸಿಸಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಐಪಿಎಲ್ ಹರಾಜು ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹರಾಜು ಪ್ರಕ್ರಿಯೆ ಎರಡು ದಿನಗಳ ಕಾಲ ನಡೆಯುವ ನಿರೀಕ್ಷೆ ಇದ್ದು, ವಸತಿ ಸವಾಲುಗಳು ಹಾಗೂ ಪ್ರಮುಖ ಪಾಲುದಾರರ ಲಭ್ಯತೆಯನ್ನು ಖಚಿತಪಡಿಸಲು ಬಿಸಿಸಿಐ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಕಳೆದ ವರ್ಷ ಐಪಿಎಲ್ ಹರಾಜು ದುಬೈನಲ್ಲಿ ನಡೆದಿತ್ತು.
Next Story