ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 272/7
ಸುನೀಲ್ ನರೇನ್, ರಘುವಂಶಿ ಅರ್ಧಶತಕ
Photo: PTI
ವಿಶಾಖಪಟ್ಟಣ: ಆರಂಭಿಕ ಬ್ಯಾಟರ್ ಸುನೀಲ್ ನರೇನ್(85 ರನ್, 39 ಎಸೆತ), ರಘುವಂಶಿ(54 ರನ್, 27 ಎಸೆತ) ಅರ್ಧಶತಕ, ಆಂಡ್ರೆ ರಸೆಲ್(41 ರನ್, 19 ಎಸೆತ) ಹಾಗೂ ರಿಂಕು ಸಿಂಗ್(26 ರನ್, 8 ಎಸೆತ)ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬುಧವಾರ ನಡೆದ ಐಪಿಎಲ್ ನ 16ನೇ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಕೆಕೆಆರ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 272 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಫಿಲ್ ಸಾಲ್ಟ್ ಜೊತೆ ಇನಿಂಗ್ಸ್ ಆರಂಭಿಸಿದ ನರೇನ್ ಮೊದಲ ವಿಕೆಟ್ ಗೆ 4.3 ಓವರ್ಗಳಲ್ಲಿ 60 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು.
ಕೆಕೆಆರ್ ಬ್ಯಾಟರ್ಗಳಿಂದ ದಂಡನೆಗೆ ಒಳಗಾದ ಡೆಲ್ಲಿ ತಂಡದ ಪರ ಅನ್ರಿಚ್ ನೋರ್ಟ್ಜೆ(3-59) ಹಾಗೂ ಇಶಾಂತ್ ಶರ್ಮಾ(2-42) ಐದು ವಿಕೆಟ್ಗಳನ್ನು ಹಂಚಿಕೊಂಡರು.
Next Story