ಜಡೇಜ ಖಾತೆಗೆ 300 ಟೆಸ್ಟ್ ವಿಕೆಟ್ | ಈ ಸಾಧನೆಗೈದ 7ನೇ ಭಾರತೀಯ
ರವೀಂದ್ರ ಜಡೇಜ | PC : PTI
ಕಾನ್ಪುರ : ರವೀಂದ್ರ ಜಡೇಜ ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ಗಳನ್ನು ಪಡೆದ ಏಳನೇ ಭಾರತೀಯ ಕ್ರಿಕೆಟಿಗನಾಗಿ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಅವರು ಈ ದಾಖಲೆಯನ್ನು ನಿರ್ಮಿಸಿದರು.
35 ವರ್ಷದ ಸ್ಪಿನ್ನರ್ ಜಡೇಜ ಮೊದಲ ಇನಿಂಗ್ಸ್ನ ತನ್ನ 10ನೇ ಓವರ್ನಲ್ಲಿ ಖಾಲಿದ್ ಅಹ್ಮದ್ರ ವಿಕೆಟನ್ನು ಉರುಳಿಸುವುದರೊಂದಿಗೆ ಅವರು ಈ ಮೈಲಿಗಲ್ಲನ್ನು ಸ್ಥಾಪಿಸಿದರು.
ಅವರು ಈ ಸಾಧನೆಯನ್ನು ಮಾಡಿದ ಭಾರತದ ಮೊದಲ ಎಡಗೈ ಸ್ಪಿನ್ನರ್ ಆಗಿದ್ದಾರೆ. ಅವರು ಕೇವಲ 73 ಟೆಸ್ಟ್ಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಅವರು 23.98ರ ಸರಾಸರಿಯಲ್ಲಿ ಮತ್ತು 58.10 ಸ್ಟ್ರೈಕ್ ರೇಟ್ನಲ್ಲಿ 300 ವಿಕೆಟ್ಗಳನ್ನು ಪಡೆದಿದ್ದಾರೆ.
ಇದೇ ಅವಧಿಯಲ್ಲಿ ಅವರು 36.72ರ ಸರಾಸರಿಯಲ್ಲಿ 3,122 ಟೆಸ್ಟ್ ರನ್ಗಳನ್ನೂ ಕಲೆ ಹಾಕಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 21 ಅರ್ಧ ಶತಕಗಳಿವೆ.
ಅವರು 300 ವಿಕೆಟ್ಗಳನ್ನು ವೇಗವಾಗಿ ಪಡೆದ ಭಾರತೀಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರಿಗಿಂತ ಮೊದಲಿನ ಸ್ಥಾನಗಳಲ್ಲಿ ಆರ್. ಅಶ್ವಿನ್ (54 ಪಂದ್ಯಗಳು), ಅನಿಲ್ ಕುಂಬ್ಳೆ (66) ಮತ್ತು ಹರ್ಭಜನ್ ಸಿಂಗ್ (72) ಇದ್ದಾರೆ.
ಅದೂ ಅಲ್ಲದೆ, ಅವರು ಏಕದಿನ ಪಂದ್ಯಗಳಲ್ಲಿ 2,756 ರನ್ಗಳು ಮತ್ತು 220 ವಿಕೆಟ್ಗಳನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಟ್ವೆಂಟಿ20 ಪಂದ್ಯಗಳಲ್ಲಿ ಅವರು 515 ರನ್ಗಳು ಮತ್ತು 54 ವಿಕೆಟ್ಗಳನ್ನು ಗಳಿಸಿದ್ದಾರೆ