ಯುಸ್ ಓಪನ್ ಫೈನಲ್ ತಲುಪಿದ ಮೊಟ್ಟಮೊದಲ ಇಟಲಿ ಆಟಗಾರ ಜನ್ನಿಕ್ ಸಿನ್ನರ್
PC: facebook.com/jannik.sinner
ಹೊಸದಿಲ್ಲಿ: ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಜನ್ನಿಕ್ ಸಿನ್ನೆರ್ ಅವರು ಇಲ್ ಜ್ಯಾಕ್ ಡಾರ್ಪರ್ ಅವರನ್ನು ಶುಕ್ರವಾರ ನೇರ ಸೆಟ್ ಗಳಲ್ಲಿ ಮಣಿಸಿ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ತಲುಪಿದರು. ಈ ಮೂಲಕ ಈ ಸಾಧನೆ ಮಾಡಿದ ಮೊಟ್ಟಮೊದಲ ಇಟೆಲಿ ಆಟಗಾರ ಎಂಬ ದಾಖಲೆ ಸೃಷ್ಟಿಸಿದರು.
ಈ ಮುನ್ನ ಆಸ್ಟ್ರೇಲಿಯನ್ ಓಪನ್ ಕೂಟದಲ್ಲಿ ಪ್ರಶಸ್ತಿ ಗೆದ್ದಿದ್ದ ಸಿನ್ನೆರ್, 7-5, 7-6 (7/3), 6-2 ಅಂತರದಿಂದ ಎದುರಾಳಿಯನ್ನು ಸದೆಬಡಿದರು. ಸಿನ್ನೆರ್ ಇದೀಗ, ಭಾನುವಾರ ನಡೆಯುವ ಫೈನಲ್ ನಲ್ಲಿ ಟೇಲರ್ ಫ್ರಿಟ್ಸ್ ಅಥವಾ ಫ್ರಾನ್ಸಿಸ್ ತಿಯಾಫ್ ಅವರನ್ನು ಎದುರಿಸಲಿದ್ದಾರೆ.
"ಜ್ಯಾಕ್ ಹಾಗೂ ನಾನು ಪರಸ್ಪರ ತೀರಾ ಪರಿಚಿತರು. ಕೋರ್ಟ್ ನಲ್ಲಿ ನಾವು ಒಳ್ಳೆಯ ಸ್ನೇಹಿತರು" ಎಂದು ಸಿನ್ನೆರ್ ಹೇಳಿದರು. ಒಂದು ಹಂತದಲ್ಲಿ ಕೋರ್ಟ್ ನಲ್ಲಿ ಬಿದ್ದ ಸಿನ್ನೆರ್ ಮಣಿಗಟ್ಟಿನ ಗಾಯಕ್ಕೂ ಒಳಗಾದರು. ಇದು ಅತ್ಯಂತ ದೈಹಿಕ ಶ್ರಮದ ಪಂದ್ಯವಾಗಿತ್ತು. ಜ್ಯಾಕ್ ಅವರನ್ನು ಸೋಲಿಸುವುದು ಕಠಿಣವಾಗಿತ್ತು. ಫೈನಲ್ ತಲುಪಿರುವುದಕ್ಕೆ ರೋಮಾಂಚನವಾಗುತ್ತಿದೆ ಎಂದರು.
ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಐದು ಸುತ್ತುಗಳಲ್ಲಿ ಒಂದು ಸೆಟ್ ಕೂಡಾ ಬಿಟ್ಟುಕೊಡದ ಡಾರ್ಪರ್, ಸಿನ್ನರ್ ವಿರುದ್ಧದ ಪಂದ್ಯದಲ್ಲಿ ತೀರಾ ಒತ್ತಡಕ್ಕೆ ಒಳಗಾದಂತೆ ಕಂಡರು. ಅಗ್ರ ಶ್ರೇಯಾಂಕದ ಇಟೆಲಿ ಆಟಗಾರ, ಡಾರ್ಪರ್ ಅವರ ಡಬಲ್ ಫಾಲ್ಟ್ ಪ್ರಯೋಜನ ಪಡೆದು, 11ನೇ ಗೇಮ್ ನಲ್ಲಿ ಬ್ರೇಕ್ ಮಾಡಿದರು. ಫೈನಲ್ ನಾನು ಇದುವರೆಗೆ ಆಡಿದ ಎಲ್ಲ ಪಂದ್ಯಗಳಿಗಿಂತಲೂ ಸವಾಲುದಾಯಕವಾಗಿರುತ್ತದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ ಅವರು, ಅಮೆರಿಕನ್ ಎದುರಾಳಿ ವಿರುದ್ಧ ಸೆಣೆಸಬೇಕಾಗುತ್ತದೆ ಎಂದರು.