ಐಸಿಸಿ ಟೆಸ್ಟ್ : ಜಸ್ಪ್ರಿತ್ ಬುಮ್ರಾ ನಂ.1 ಬೌಲರ್

ಜಸ್ಪ್ರಿತ್ ಬುಮ್ರಾ | PC : PTI
ಹೊಸದಿಲ್ಲಿ: ಭಾರತದ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಗ್ನಲ್ಲಿ ತನ್ನ ನಂ.1 ಬೌಲರ್ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆಲ್ರೌಂಡರ್ಗಳ ವಿಭಾಗದಲ್ಲಿ ರವೀಂದ್ರ ಜಡೇಜ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
907 ಅಂಕದೊಂದಿಗೆ ಗರಿಷ್ಠ ಐಸಿಸಿ ರೇಟಿಂಗ್ ಮಾಡಿದ ಭಾರತೀಯ ಬೌಲರ್ ಎನಿಸಿಕೊಂಡು ಇತ್ತೀಚೆಗೆ ಇತಿಹಾಸ ನಿರ್ಮಿಸಿದ್ದ ಬುಮ್ರಾ ಇದೀಗ ಜೀವನಶ್ರೇಷ್ಠ 908 ಅಂಕ ಗಳಿಸಿದ್ದಾರೆ. ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್(841)ಹಾಗೂ ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ(837)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಮುಲ್ತಾನ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ 6 ವಿಕೆಟ್ ಗೊಂಚಲು ಪಡೆದಿದ್ದ ಪಾಕಿಸ್ತಾನದ ನುಮಾನ್ ಅಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
Next Story