ಸತತ 3ನೇ ಶತಕ ದಾಖಲಿಸಿದ ಕರ್ನಾಟಕದ ನಾಯಕ ಮಯಾಂಕ್ ಅಗರ್ವಾಲ್
ಮಯಾಂಕ್ ಅಗರ್ವಾಲ್ | PC : PTI
ಹೊಸದಿಲ್ಲಿ : ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದ ಮಯಾಂಕ್ ಅಗರ್ವಾಲ್ ಕರ್ನಾಟಕ ತಂಡದ ಪರ ಮತ್ತೊಂದು ಶತಕ ಗಳಿಸಿದರು. ಈಗಾಗಲೇ ಅರುಣಾಚಲ ಪ್ರದೇಶ ಹಾಗೂ ಪಂಜಾಬ್ ವಿರುದ್ಧ ಶತಕ ಗಳಿಸಿದ್ದ ಮಯಾಂಕ್ ಇದೀಗ ಹ್ಯಾಟ್ರಿಕ್ ಶತಕ ಗಳಿಸಿದರು.
ಹೈದರಾಬಾದ್ ವಿರುದ್ಧ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಯಾಂಕ್ ಮತ್ತೊಂದು ಶತಕ (124 ರನ್, 112 ಎಸೆತ, 15 ಬೌಂಡರಿ, 2 ಸಿಕ್ಸರ್)ಸಿಡಿಸಿ ಕರ್ನಾಟಕ ತಂಡ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 320 ರನ್ ಗಳಿಸಲು ನೆರವಾದರು. ಆದರೆ ಈ ಪಂದ್ಯವನ್ನು ಹೈದರಾಬಾದ್ 3 ವಿಕೆಟ್ಗಳಿಂದ ಗೆದ್ದುಕೊಂಡಿದೆ. ವರುಣ್ ಗೌಡ್(ಔಟಾಗದೆ 109,82 ಎಸೆತ)ತಂಡದ ಗೆಲುವಿನ ರೂವಾರಿಯಾದರು.
ಚಾಮಾ ಮಿಲಿಂದ್(3-66)ಹೈದರಾಬಾದ್ ಪರ ಯಶಸ್ವಿ ಪ್ರದರ್ಶನ ನೀಡಿದರು.
ಮಯಾಂಕ್ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 142.66ರ ಸರಾಸರಿಯಲ್ಲಿ 3 ಶತಕಗಳ ಸಹಿತ ಒಟ್ಟು 428 ರನ್ ಗಳಿಸಿದ್ದಾರೆ.
Next Story