ಕಿವೀಸ್ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉದುರಿದ ಅಫ್ಘಾನ್ ವಿಕೆಟ್ ಗಳು
ವಿಶ್ವಕಪ್ : 149 ರನ್ ಗಳ ಜಯ, ಗೆಲುವಿನ ಓಟ ಮುಂದುವರಿಸಿದ ನ್ಯೂಝಿಲ್ಯಾಂಡ್
PHOTO : Cricketworldcup.com
ಚೆನ್ನೈ:ಇಲ್ಲಿನ ಎಂ.ಎ ಚಿದಂಬರಂ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ 149 ರನ್ ಗಳ ಜಯ ಗಳಿಸಿದೆ. ನ್ಯೂಝಿಲ್ಯಾಂಡ್ ನೀಡಿದ 289 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ 34.4 ಓವರ್ ಗಳಲ್ಲಿ 139 ರನ್ ಗೆ ಆಲೌಟ್ ಆಯಿತು. ಸತತ ನಾಲ್ಕು ಪಂದ್ಯಗಳಲ್ಲಿ ಜಯಗಳಿಸಿದ ನ್ಯೂಝಿಲ್ಯಾಂಡ್ ಪಾಯಿಂಟ್ ಪಟ್ಟಿಯಲ್ಲಿ 8 ಅಂಕ ಗಳಿಸುವುದರೊಂದಿಗೆ ಅಗ್ರಸ್ಥಾನಕ್ಕೇರಿತು.
ಆಫ್ಘಾನಿಸ್ತಾನ ಧನಾತ್ಮಕ ವಾಗಿಯೇ ಬ್ಯಾಟಿಂಗ್ ಆರಂಬಿಸಿತು. ಆದರೆ ಎಡಕೈ ವೇಗಿ ಟ್ರೆಂಟ್ ಬೋಲ್ಟ್ ಹಾಗೂ ಮಾಟ್ ಹೆನ್ರಿ ಪ್ರಾರಂಭಿಕ ಶಿಸ್ತುಬದ್ದ ದಾಳಿ ಅಫ್ಘಾನ್ ತಂಡ ದ ಆರಂಭಿಕ ಎರಡು ವಿಕೆಟ್ ಬೇಗ ಕಳೆದುಕೊಳ್ಳುವಂತೆ ಮಾಡಿತು. ರಹ್ಮಾನುಲ್ಲಾ ಗುರ್ಬಾಝ್ 11 ಗಳಿಸಿದರೆ. ಇಬ್ರಾಹಿಂ ಝರ್ದಾನ್ 14 ರನ್ ಬಾರಿಸಿದ್ದರು. ತಂಡವನ್ನು ಗೆಲುವಿನ ದಡ ಸೇರಿವ ಜವಾಬ್ದಾರಿ ಹೊತ್ತಿದ್ದ ನಾಯಕ ಹಶ್ಮತುಲ್ಲಾ ಶಾಹೀದಿ (9) ಪಿಚ್ ಅರಿತು ಬ್ಯಾಟಿಂಗ್ ಮಾಡುವ ಬದಲು ಅನಗತ್ಯ ರನ್ ಗೆ ಕೈ ಹಾಕಿ ಲೋಕಿ ಫರ್ಗ್ಯುಸನ್ ಗೆ ವಿಕೆಟ್ ನೀಡುವುದರ ಮೂಲಕ ತಂಡದ ಒತ್ತಡ ಹೆಚ್ಚಿಸಿದರು. ಬಳಿಕ ಕೊಂಚ ಚೇತರಿಸಿಕೊಂಡು 54 ರನ್ ಜೊತೆಯಾಟ ಆಡಿದ ರಹ್ಮತ್ ಶಾ ಹಾಗೂ ಅಝ್ಮತುಲ್ಲಾ ಒಮಾರ್ಝೈ ಒಬ್ಬರ ಹಿಂದೆ ಒಬ್ಬರಂತೆ ಕ್ರಮವಾಗಿ 36, 27 ಗಳಿಸಿ ವಿಕೆಟ್ ಕಳೆದುಕೊಂಡರು. ನಿರಂತರ ವಿಕೆಟ್ ಗಳ ಪತನ ಅಫ್ಘಾನ್ ಗೆಲುವಿನ ಆಸೆ ಗೆ ತಣ್ಣೀರು ಎರಚಿತು. ಕೊನೆಯ ಕ್ರಮಾಂಕದಲ್ಲಿ ಬಂದ ಬ್ಯಾಟರ್ ಗಳಾದ ಮೊಹಮ್ಮದ್ ನಬಿ 7, ರಶೀದ್ ಖಾನ್ 4, ಮುಜೀಬುರ್ರಹ್ಮಾನ್ 4, ನವೀನ್ ಉಲ್ ಹಕ್ ಹಾಗೂ ಫಝಲ್ ಹಕ್ ಫರೂಕಿ ಸೊನ್ನೆ ಸುತ್ತುವುದರೊಂದಿಗೆ ಅಫ್ಘಾನಿಸ್ತಾನ 139 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಅಚ್ಚರಿ ಫಲಿತಾಂಶದ ನಿರೀಕ್ಷೆ ಹುಸಿಯಾಗಿಸಿತು.
ಮಿಷೆಲ್ ಸ್ಯಾಂಟ್ನರ್ , ಲೊಕಿ ಫರ್ಗ್ಯೂಸನ್ ತಲಾ 3 ವಿಕೆಟ್ ಪಡೆದರು. ಟೆಂಟ್ ಬೋಲ್ಟ್ 2, ಮ್ಯಾಟ್ ಹೆನ್ರಿ,ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
ಮೊದಲು ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ನಾಯಕ ಅಶ್ಮಾತುಲ್ಲಾ ಶಾಹೀದಿ ಬೌಲಿಂಗ್ ಆಯ್ದುಕೊಂಡರು.
ಬ್ಯಾಟಿಂಗ್ ಬಂದ ನ್ಯೂಝಿಲ್ಯಾಂಡ್ ಬ್ಯಾಟರ್ ಡೇವೂನ್ ಕಾನ್ವೇ 20 ರನ್ ಗಳಿಸಿ ಮುಜೀಬ್ ಬೌಲಿಂಗ್ ನಲ್ಲಿ ಔಟ್ ಆದರೆ ನಾಯಕ ಕೇನ್ ವಿಲಿಯಮ್ಸನ್ ಬದಲಿಗೆ ಆಡುವ 11 ರ ಬಳಗದಲ್ಲಿ ಕಾಣಿಸಿಕೊಂಡ ವಿಲ್ ಯಂಗ್ 4 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಬಾರಿಸಿದರು. ಹೀಗೆ ಅರ್ಧಶತಕ ಬಾರಿಸಿ ಬ್ಯಾಟ್ ಮಾಡುತ್ತಿದ್ದ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ರನ್ನು ಒಂದೇ ಓವರ್ ನಲ್ಲಿ ಔಟ್ ಮಾಡಿದ ಅಜ್ಮಾತುಲ್ಲಾ ಒಮರ್ಜೈ ನ್ಯೂಝಿಲ್ಯಾಂಡ್ ಅಗ್ರಕ್ರಮಾಂಕ ವನ್ನು ಪೆವಿಲಿಯನ್ ಗೆ ಕಳುಹಿಸಿದರು. ಅವರಿಗೆ ಸಾಥ್ ನೀಡಿದ ಸ್ಪಿನ್ನರ್ ರಶೀದ್ ಖಾನ್ ಮುಂದಿನ ಓವರ್ ನಲ್ಲಿಯೇ ಡರಲ್ ಮಿಚೆಲ್ ರನ್ನು 1 ರನ್ ಗೆ ಔಟ್ ಮಾಡಿದರು. 110 ರನ್ ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಕ್ಕೆ ಸಿಲುಕಿದ್ದ ನ್ಯೂಝಿಲ್ಯಾಂಡ್ ಗೆ ನಾಯಕ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ ಪರಸ್ಪರ ಅರ್ಧಶತಕ ಗಳಿಸುವ ಮೂಲಕ ಆಸರೆ ಯಾದರು.ಟಾಮ್ ಲಾಥಮ್ 74 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 68 ರನ್ ಬಾರಿಸಿದರೆ,ಗ್ಲೇನ್ ಫಿಲಿಪ್ಸ್ 80 ಎಸೆತಗಳಲ್ಲಿ 4 ಬೌಂಡರಿ 4ಸಿಕ್ಸರ್ ಸಹಿತ 71 ಗಳಿಸುವ ಮೂಲಕ ತಂಡ ಅಲ್ಪ ಮೊತ್ತಕ್ಕೆ ಕುಸಿಯುದನ್ನು ತಡೆದರು. ಆದರೆ ಮತ್ತೆ ನ್ಯೂಝಿಲ್ಯಾಂಡ್ ನ್ನು ಕಟ್ಟಿಹಾಕಿದ ನವೀನ್ ಉಲ್ ಹಕ್ 48 ನೇ ಓವರ್ ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಔಟ್ ಮಾಡುವ ಮೂಲಕ ತಂಡ ಮುನ್ನೂರ ಗಡಿ ದಾಟುವುದನ್ನು ತಡೆದರು. ಕಡೇ ಕ್ಷಣದಲ್ಲಿ ಮಾರ್ಕ್ ಚಾಪ್ಮನ್ 25 ಬಾರಿದರೆ ಸಾಂಟ್ನರ್ 7ನ್ ಗಳಿಸಿ ಸಾಥ್ ನೀಡಿದರು.
ಆಫ್ಘಾನಿಸ್ತಾನ ಪರ ಅಝ್ಮತುಲ್ಲಾ ಒಮಾರ್ಝೈ, ನವೀನ್ ಉಲ್ ಹಕ್ 2 ವಿಕೆಟ್ ಪಡೆದರೆ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.