ಐಪಿಎಲ್ ಓವರ್ ಒಂದರಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿ: ಶೆಫರ್ಡ್ ಗೆ 6ನೇ ಸ್ಥಾನ
ರೊಮಾರಿಯೊ ಶೆಫರ್ಡ್ | PC : X \ @LoyalSachinFan
ಮುಂಬೈ: ಮುಂಬೈ ಇಂಡಿಯನ್ಸ್ ಬ್ಯಾಟರ್ ರೊಮಾರಿಯೊ ಶೆಫರ್ಡ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ವಾಂಖೆಡೆ ಸ್ಟೇಡಿಯಮ್ನಲ್ಲಿ ರವಿವಾರ ನಡೆದ ಐಪಿಎಲ್ ಪಂದ್ಯದ ಅಂತಿಮ ಓವರ್ನಲ್ಲಿ ಅಬ್ಬರಿಸಿ ಪಂದ್ಯದ ಚಿತ್ರಣ ಬದಲಿಸಿದ್ದಾರೆ.
ಕೊನೆಯ ಓವರ್ನಲ್ಲಿ 32 ರನ್ ಗಳಿಸಿದ ಶೆಫರ್ಡ್ ಮುಂಬೈ ತಂಡವು 5 ವಿಕೆಟ್ ಗಳ ನಷ್ಟಕ್ಕೆ 234 ರನ್ ಗಳಿಸಲು ನೆರವಾಗಿದ್ದರು. ಮಾತ್ರವಲ್ಲ ಈ ಪಂದ್ಯವನ್ನು 29 ರನ್ನಿಂದ ಗೆಲ್ಲಲು ಕಾರಣರಾಗಿದ್ದರು.
ಡೆಲ್ಲಿ ಬೌಲರ್ ಅನ್ರಿಚ್ ನೋರ್ಟ್ಜೆ ಎಸೆದ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಹಿತ ಒಟ್ಟು 4 ಸಿಕ್ಸರ್ ಹಾಗೂ 2 ಬೌಂಡರಿ ಗಳಿಸಿ 32 ರನ್ ದೋಚಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಆರನೇ ಅತ್ಯಂತ ದುಬಾರಿ ಓವರ್ ಆಗಿದೆ.
ಐಪಿಎಲ್ ಓವರ್ವೊಂದರಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯನ್ನು ಕ್ರಿಸ್ ಗೇಲ್ ಹಾಗೂ ರವೀಂದ್ರ ಜಡೇಜ ಹಂಚಿಕೊಂಡಿದ್ದಾರೆ. ಈ ಇಬ್ಬರು ಒಂದೇ ಓವರ್ನಲ್ಲಿ ತಲಾ 37 ರನ್ ಗಳಿಸಿದ್ದರು. ಗೇಲ್ 2011ರಲ್ಲಿ ಆರ್ಸಿಬಿ ಪರ ಈಗ ರದ್ದಾಗಿರುವ ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಈ ಸಾಧನೆ ಮಾಡಿದ್ದರೆ, 10 ವರ್ಷಗಳ ನಂತರ 2021ರಲ್ಲಿ ಸಿಎಸ್ಕೆ ಪರ ಜಡೇಜ ಅವರು ಆರ್ಸಿಬಿಯ ಹರ್ಷಲ್ ಪಟೇಲ್ ಬೌಲಿಂಗ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಗೇಲ್ ದಾಖಲೆ ಸರಿಗಟ್ಟಿದ್ದರು.