ಶ್ರೀಲಂಕಾದಲ್ಲಿ ಆಸ್ಟ್ರೇಲಿಯದ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್ ಎನಿಸಿಕೊಂಡ ಲಿಯೊನ್

ನಾಥನ್ ಲಿಯೊನ್ | PTI
ಗಾಲೆ: ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಸ್ಪಿನ್ ಮಾಂತ್ರಿಕ ನಾಥನ್ ಲಿಯೊನ್ ಲೆಜೆಂಡರಿ ಸ್ಪಿನ್ನರ್ ಶೇನ್ ವಾರ್ನ್ ಅವರ ದಾಖಲೆಯನ್ನು ಮುರಿದರು.
ಗಾಲೆ ಟೆಸ್ಟ್ನಲ್ಲಿ ಶ್ರೀಲಂಕಾದ ಮೇಲೆ ಸವಾರಿ ಮಾಡಿದ ಲಿಯೊನ್ ದ್ವೀಪರಾಷ್ಟ್ರದ ವಿರುದ್ಧ ಒಟ್ಟು 60 ವಿಕೆಟ್ಗಳನ್ನು ಪಡೆದಿದ್ದು, ವಾರ್ನ್(59)ಅವರ ದಾಖಲೆಯನ್ನು ಮುರಿದಿದ್ದಾರೆ.
ಲಿಯೊನ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ಗಳನ್ನು ಉರುಳಿಸಿ ಆಸ್ಟ್ರೇಲಿಯ ತಂಡವು 2-0 ಅಂತರದಿಂದ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಆಫ್-ಸ್ಪಿನ್ನರ್ ಲಿಯೊನ್ 2ನೇ ಇನಿಂಗ್ಸ್ನಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದು ಶ್ರೀಲಂಕಾ ತಂಡದ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣರಾದರು. ಶ್ರೀಲಂಕಾದ ಪ್ರಮುಖ ಆಟಗಾರ ಕುಸಾಲ್ ಮೆಂಡಿಸ್ಗೆ ಲಿಯೊನ್ ಪೆವಿಲಿಯನ್ ಹಾದಿ ತೋರಿಸಿದರು.
►ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳು
ನಾಥನ್ ಲಿಯೊನ್-60 ವಿಕೆಟ್ಗಳು
ಶೇನ್ ವಾರ್ನ್-59 ವಿಕೆಟ್ಗಳು
ಮಿಚೆಲ್ ಸ್ಟಾರ್ಕ್-57 ವಿಕೆಟ್ಗಳು
ಗ್ಲೆನ್ ಮೆಕ್ಗ್ರಾತ್-37 ವಿಕೆಟ್ಗಳು
ಕ್ರೆಗ್ ಮೆಕ್ಡೆರ್ಮೊಟ್-27 ವಿಕೆಟ್ಗಳು