ಮಧ್ಯಪ್ರದೇಶ-ಕರ್ನಾಟಕ ಪಂದ್ಯ ಡ್ರಾನಲ್ಲಿ ಅಂತ್ಯ
ಶತಕ ವಂಚಿತ ನಿಕಿನ್ ಜೋಸ್
ನಿಕಿನ್ ಜೋಸ್ | PC : X
ಇಂದೋರ್ : ಆತಿಥೇಯ ಮಧ್ಯಪ್ರದೇಶ ಹಾಗೂ ಕರ್ನಾಟಕ ತಂಡಗಳ ನಡುವೆ ಸೋಮವಾರ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ.
ಶನಿವಾರ ಎರಡನೇ ದಿನದಾಟವು ಒಂದೂ ಎಸೆತ ಕಾಣದೆ ರದ್ದಾಗಿರುವ ಹಿನ್ನೆಲೆಯಲ್ಲಿ ಪಂದ್ಯದಲ್ಲಿ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ.
ಮೊದಲ ಹಾಗೂ 3ನೇ ದಿನದಾಟದುದ್ದಕ್ಕೂ ಮಧ್ಯಪ್ರದೇಶ ತಂಡ ಬ್ಯಾಟಿಂಗ್ನಲ್ಲಿ ಮೆರೆದಾಡಿತು.
4ನೇ ಹಾಗೂ ಅಂತಿಮ ದಿನವಾದ ಸೋಮವಾರ ತನ್ನ ಮೊದಲ ಇನಿಂಗ್ಸ್ ಅನ್ನು 8 ವಿಕೆಟ್ಗಳ ನಷ್ಟಕ್ಕೆ 425 ರನ್ಗೆ ಡಿಕ್ಲೇರ್ ಮಾಡಿದ ಮಧ್ಯಪ್ರದೇಶ ತಂಡ ಕರ್ನಾಟಕ ತಂಡಕ್ಕೆ ಬ್ಯಾಟಿಂಗ್ಗೆ ಅವಕಾಶ ನೀಡಿತು.
ಕರ್ನಾಟಕ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 75 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 206 ರನ್ ಗಳಿಸಿತು. ಆರಂಭಿಕ ಆಟಗಾರ ನಿಕಿನ್ ಜೋಸ್ (99 ರನ್, 216 ಎಸೆತ, 8 ಬೌಂಡರಿ,4 ಸಿಕ್ಸರ್)ಕಾರ್ತಿಕೇಯ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದು ಕೇವಲ ಒಂದು ರನ್ನಿಂದ ಶತಕ ವಂಚಿತರಾದರು. ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು.
ಆಲ್ರೌಂಡರ್ ಶ್ರೇಯಸ್ ಗೋಪಾಲ್(ಔಟಾಗದೆ 60, 110 ಎಸೆತ, 7 ಬೌಂಡರಿ, 1 ಸಿಕ್ಸರ್)ಅರ್ಧಶತಕದ ಕೊಡುಗೆ ನೀಡಿದರು.
ನಾಯಕ ಮಯಾಂಕ್ ಅಗರ್ವಾಲ್ ರನ್ ಖಾತೆ ತೆರೆಯುವಲ್ಲಿ ವಿಫಲರಾಗಿ ಕಾರ್ತಿಕೇಯಗೆ ವಿಕೆಟ್ ಒಪ್ಪಿಸಿದರು. ದೇವದತ್ತ ಪಡಿಕ್ಕಲ್(16 ರನ್), ಆರ್. ಸಮ್ರಾನ್(17) ಎರಡಂಕೆಯ ಸ್ಕೋರ್ ಗಳಿಸಿದರು.
ಮಧ್ಯಪ್ರದೇಶದ ಪರ ಕುಮಾರ ಕಾರ್ತಿಕೇಯ(3-68)ಯಶಸ್ವಿ ಪ್ರದರ್ಶನ ನೀಡಿದರು. ಸಾರಾಂಶ್ ಜೈನ್(2-103)ಎರಡು ವಿಕೆಟ್ ಪಡೆದರು.
ಔಟಾಗದೆ 143 ರನ್ ಗಳಿಸಿದ ಮಧ್ಯಪ್ರದೇಶ ತಂಡದ ನಾಯಕ ಶುಭಮ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
► ಸಂಕ್ಷಿಪ್ತ ಸ್ಕೋರ್
ಮಧ್ಯಪ್ರದೇಶ ಮೊದಲ ಇನಿಂಗ್ಸ್: 425/8 ಡಿಕ್ಲೇರ್
ಕರ್ನಾಟಕ ಮೊದಲ ಇನಿಂಗ್ಸ್: 206/5
(ನಿಕಿನ್ ಜೋಸ್ 99, ಶ್ರೇಯಸ್ ಗೋಪಾಲ್ ಔಟಾಗದೆ 60, ಕುಮಾರ್ ಕಾರ್ತಿಕೇಯ 3-68, ಸಾರಾಂಶ್ ಜೈನ್ 2-103)
ಪಂದ್ಯಶ್ರೇಷ್ಠ: ಶುಭಮ್ ಶರ್ಮಾ.