ಮಾರ್ಷ್ ʼಮಿಸೈಲ್ʼ, ಆಸೀಸ್ಗೆ ಭರ್ಜರಿ ಜಯ
ವಿಶ್ವಕಪ್ : ಬಾಂಗ್ಲಾ ವಿರುದ್ಧ 177 ಬಾರಿಸಿದ ಆಸ್ಟ್ರೇಲಿಯಾ ಬ್ಯಾಟರ್
Photo : cricketworldcup.com
ಪುಣೆ: ಇಲ್ಲಿನ ಮಹಾರಾಷ್ಟ ಕ್ರಿಕೆಟ್ ಅಸೊಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯ ತಂಡ ಮಿಷೆಲ್ ಮಾರ್ಷ್ 177 ರನ್ ಶತಕದ ವೈಭವದಿಂದ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.
ಬಾಂಗ್ಲಾ ನೀಡಿದ 307 ರನ್ ಕಠಿಣ ಗುರಿ ಬೆನ್ನಟ್ಟಿದ ಆಸ್ಟೇಲಿಯ ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಆಸೀಸ್ ಪರ ಟ್ರಾವಿಸ್ ಹೆಡ್ ಕೇವಲ 10 ರನ್ ಗೆ ತಸ್ಕಿನ್ ಅಹ್ಮದ್ ಎಸೆತದಲ್ಲಿ ಬೌಲ್ಡ್ ಆದರು. 12 ರನ್ ಗೆ ಮೊದಲ ವಿಕೆಟ್ ಕಳೆದುಕೊಂಡ ಆಸೀಸ್ ಬಳಿಕ ಭರ್ಜರಿ ಆಟ ಮುಂದುವರಿಸಿತು. ಡೇವಿಡ್ ವಾರ್ನರ್ ಹಾಗೂ ಮಿಷೆಲ್ ಮಾರ್ಷ್ ಜೋಡಿ ಬಾಂಗ್ಲಾ ಬೌಲರ್ಗಳನ್ನು ದಂಡಿಸಿದರು. ವಾರ್ನರ್ 6 ಬೌಂಡರಿ ಸಹಿತ 53 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಸ್ಟೋಟಕ ಬ್ಯಾಟಿಂಗ್ ಮೂಲಕ ಬಾಂಗ್ಲಾ ಕೆಡವಿದ ಮಾರ್ಷ್ 132 ಎಸೆತಗಳಲ್ಲಿ 17 ಬೌಂಡರಿ 9 ಭರ್ಜರಿ ಸಿಕ್ಸರ್ ಮೂಲಕ ತಂಡವನ್ನು ಅಜೇಯವಾಗಿ ಗೆಲುವಿನ ದಡ ಸೇರಿಸಿದರು. ಅವರಿಗೆ ಸಾಥ್ ನೀಡಿದ್ದ ಸ್ಟೀವನ್ ಸ್ಮಿತ್ 63 ರನ್ ಪೇರಿಸಿದ್ದರು.
ಬಾಂಗ್ಲಾದೇಶದ ಪರ ತಸ್ಕಿನ್ ಅಹ್ಮದ್,ಮುಸ್ತಫಿಝುರ್ ಒಂದು ವಿಕೆಟ್ ಪಡೆದರು