ಇತಿಹಾಸ ನಿರ್ಮಿಸಿದ ಮುಂಬೈ ಇಂಡಿಯನ್ಸ್
ಹೊಸದಿಲ್ಲಿ: ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ 150ನೇ ಗೆಲುವು ದಾಖಲಿಸಿದ ಮೊದಲ ತಂಡ ಎನಿಸಿಕೊಂಡು ಇತಿಹಾಸ ನಿರ್ಮಿಸಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡವು ರವಿವಾರ ಲಕ್ನೊ ತಂಡವನ್ನು 54 ರನ್ನಿಂದ ಮಣಿಸಿ ಈ ಸಾಧನೆ ಮಾಡಿದೆ.
ಈ ಗೆಲುವಿನೊಂದಿಗೆ ಮುಂಬೈ ತಂಡವು ಇದೀಗ 271 ಪಂದ್ಯಗಳಲ್ಲಿ 150ರಲ್ಲಿ ಜಯ, 121 ಪಂದ್ಯಗಳಲ್ಲಿ ಸೋತಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.
ಐಪಿಎಲ್ನಲ್ಲಿ ಗರಿಷ್ಠ ಗೆಲುವು ಪಡೆದ ತಂಡಗಳ ಪಟ್ಟಿಯಲ್ಲಿ ಸಿಎಸ್ಕೆ(140 ಜಯ,248 ಪಂದ್ಯ), ಕೆಕೆಆರ್(134 ಗೆಲುವು, 261 ಪಂದ್ಯ), ಆರ್ಸಿಬಿ(266 ಪಂದ್ಯ,129 ಗೆಲುವು) ಹಾಗೂ ಡೆಲ್ಲಿ ಕ್ಯಾಪಿಟಲ್ಸ್(261 ಪಂದ್ಯ,121 ಗೆಲುವು)ತಂಡಗಳಿವೆ.
Next Story