ರಸ್ತೆ ಅಪಘಾತದಲ್ಲಿ ಸರ್ಫರಾಝ್ ಖಾನ್ ಸಹೋದರ ಮುಶೀರ್ ಖಾನ್ಗೆ ಗಾಯ
ಇರಾನಿ ಕಪ್ಗೆ ಅಲಭ್ಯ
ಸರ್ಫರಾಝ್ ಖಾನ್ ಮತ್ತು ಮುಶೀರ್ ಖಾನ್ (File Photo: PTI)
ಮುಂಬೈ: ರಸ್ತೆ ಅಪಘಾತದಲ್ಲಿ ಮುಂಬೈ ತಂಡದ ಬ್ಯಾಟರ್ ಮುಶೀರ್ ಖಾನ್ ಗಾಯಗೊಂಡಿದ್ದು, ಅವರು 16 ವಾರಗಳ ಕಾಲ ಕ್ರಿಕೆಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ಮಧ್ಯಾಹ್ನ ಮುಶೀರ್ ತನ್ನ ತಂದೆ ನೌಶಾದ್ ಖಾನ್ ಮತ್ತು ಇನ್ನಿಬ್ಬರ ಜೊತೆ ಅಜಂಗಢದಿಂದ ಲಖನೌಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಡಿವೈಡರ್ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು Indian Express ವರದಿ ಮಾಡಿದೆ.
ಘಟನೆಯಲ್ಲಿ ಮುಶೀರ್ ಅವರ ಕತ್ತಿನ ಭಾಗಕ್ಕೆ ಗಾಯವಾಗಿದ್ದು, ಅವರ ತಂದೆ ಮತ್ತು ಸಹ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಮುಶೀರ್ ಚೇತರಿಸಿಕೊಳ್ಳಲು ಕನಿಷ್ಠ 16 ವಾರಗಳು ಬೇಕಾಗಬಹುದು ಎಂದು ವೈದ್ಯರು ಹೇಳಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರವಿವಾರ ಮುಂಬೈಗೆ ತೆರಳಲಿದ್ದಾರೆ ಎನ್ನಲಾಗಿದೆ.
Next Story