ಐಪಿಎಲ್ನಲ್ಲಿ ಆಡುವಾಗ ನನ್ನ ಫಾರ್ಮ್ ಗಣನೀಯವಾಗಿ ಕುಸಿಯಿತು!
ಪಂಜಾಬ್ ಕಿಂಗ್ಸ್ ವಿರುದ್ಧ ಕಿಡಿಗಾರಿದ ಸೆಹವಾಗ್
ವೀರೇಂದ್ರ ಸೆಹವಾಗ್ | Photo: PTI
ಹೊಸದಿಲ್ಲಿ: 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ಎ (ಐಪಿಎಲ್) ಆರಂಭವಾದಂದಿನಿಂದ ಈವರೆಗೆ ಮೂರು ತಂಡಗಳು ಪ್ರಶಸ್ತಿ ಗೆದ್ದಿಲ್ಲ. ಅವುಗಳೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್.
ಭಾರತೀಯ ಕ್ರಿಕೆಟ್ ತಂಡಗ ಮಾಜಿ ಆಟಗಾರ ವೀರೇಂದ್ರ ಸೆಹವಾಗ್ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) (ಹಿಂದೆ ಅದು ಕಿಂಗ್ಸ್ ಇಲೆವೆನ್ ಪಂಜಾಬ್ ಆಗಿತ್ತು) ಪರವಾಗಿ ಎರಡು ಋತುಗಳಲ್ಲಿ ಆಡಿದ್ದಾರೆ.
ಈಗ ತಾನು ಆಡಿರುವ ತಂಡದ ವಿರುದ್ಧ ಕಿಡಿಗಾರಿರುವ ಸೆಹವಾಗ್, ಆ ತಂಡದಲ್ಲಿ ಇದ್ದಾಗ ನನ್ನ ಫಾರ್ಮ್ ಗಣನೀಯವಾಗಿ ಕುಸಿಯಿತು ಎಂದು ಆರೋಪಿಸಿದ್ದಾರೆ.
“ನಾನು ಪಂಜಾಬ್ಗೆ ಹೋದ ಬಳಿಕ, ನನ್ನ ಸ್ಟ್ರೈಕ್ ರೇಟ್ ಕುಸಿಯಿತು. ನೀವು ಯಾರ ಜೊತೆಗೆ ಇರುತ್ತೀರೋ ನೀವು ಅವರಂತೆಯೇ ವರ್ತಿಸುತ್ತೀರಿ ಎಂಬ ಮಾತಿದೆ. ನನಗೂ ಹಾಗೆಯೇ ಆಯಿತು. ಅವರು ಏನನ್ನೂ ಗೆಲ್ಲಲಿಲ್ಲ ಅಥವಾ ಚೆನ್ನಾಗಿ ಆಡಲಿಲ್ಲ'' ಎಂದು 'ಸ್ಟಾರ್ ಸ್ಪೋಟ್ರ್ಸ್'ನಲ್ಲಿ ಮಾತನಾಡಿದ ಸೆಹವಾಗ್ ಹೇಳಿದರು.
2024ರ ಐಪಿಎಲ್ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಈವರೆಗೆ ಎರಡು ಪಂದ್ಯಗಳನ್ನು ಆಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಋತುವಿನ ತನ್ನ ಮೊದಲ ಪಂದ್ಯವನ್ನು ಗೆದ್ದ ಪಂಜಾಬ್, ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲುಂಡಿದೆ.