ನಮ್ಮ ಬೆಂಗಳೂರು ಇಂಟರ್ ನ್ಯಾಶನಲ್ ಓಪನ್ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್: ʼಬಿ’ ವಿಭಾಗದಲ್ಲಿ ಆದಿತ್ಯ ದಿಲೀಪ್ ರಾಜ್ ಗೆ ಪ್ರಶಸ್ತಿ
ಬೆಂಗಳೂರು: ಎರಡನೇ ಆವೃತ್ತಿಯ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್ ಓಪನ್ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಟೂರ್ನಿ-2025ರ ’ಎ’ ವಿಭಾಗದಲ್ಲಿ ಐದು ಸುತ್ತಿನ ನಂತರ ಸ್ಥಳೀಯ ಪ್ರತಿಭೆ ಗ್ರ್ಯಾಂಡ್ ಮಾಸ್ಟರ್ ಪ್ರಣವ್ ಆನಂದ್ ಹಾಗೂ ಜಾರ್ಜಿಯಾದ ಲೆವಾನ್ ಪಂತ್ಸುಲಿಯಾ 5/5 ಅಂಕಗಳೊಂದಿಗೆ ಸಮಬಲ ಸಾಧಿಸಿದ್ದಾರೆ.
ಇವರಿಬ್ಬರಿಗೆ ಪ್ರಬಲ ಪೈಪೋಟಿ ನೀಡಿರುವ ಏಳು ಪ್ರಬಲ ಸ್ಪರ್ಧಿಗಳ ಗುಂಪು 4 1/2 (4.5) ಅಂಕಗಳನ್ನು ಹೊಂದಿದ್ದಾರೆ. ಪ್ರಶಸ್ತಿಯ ರೇಸ್ ಮುಕ್ತವಾಗಿದೆ. ಜಿಎಂ ಮ್ಯಾನುಯೆಲ್ ಪೆಟ್ರೊಸ್ಯಾನ್ (ಅರ್ಮೇನಿಯಾ), ಜಿಎಂ ಮರಾಟ್ ಜುಮೇವ್ (ಉಜ್ಬೇಕಿಸ್ತಾನ), ಐಎಂ ಗೌತಮ್ ಕೃಷ್ಣ ಎಚ್, ಐಎಂ ಎಥಾನ್ ವಾಜ್, ಐಎಂ ಪದ್ಮಿನಿ ರೌತ್, ಐಎಂ "ಯಾನಿ ಆಂಟೋನಿಯೊ ಡಿಕುನ್ಹಾ ಮತ್ತು ಐಎಂ ಮನೀಶ್ ಆಂಟೊ ಕ್ರಿಸ್ಟಿಯಾನೊ ಅವರು ಪ್ರಶಸ್ತಿ ರೇಸ್ ನಲ್ಲಿದ್ದಾರೆ.
ರ"ವಾರ ಮುಕ್ತಾಯಗೊಂಡ ಬಿ ವರ್ಗದ ಓಪನ್ ಟೂರ್ನಿಯು ಆಕರ್ಷಕ ಅಂತ್ಯಕ್ಕೆ ಸಾಕ್ಷಿಯಾುತು. ಕೇರಳದ ಆದಿತ್ಯ ದಿಲೀಪ್ ರಾಜ್ 10ರಲ್ಲಿ 9 ಅಂಕಗಳನ್ನು ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂದ್ಯಾವಳಿಯುದ್ದಕ್ಕೂ ಅವರು ಸ್ಥಿರ ಮತ್ತು ಸಂಯೋಜಿತ ಆಟ ಆಡಿದರು.. ಅಫ್ರಿದ್ ಟಿ. ಖಾನ್ (ಆಂಧ್ರಪ್ರದೇಶ) ಮತ್ತು ರೋಹಿತ್ ಪಿ. (ತಮಿಳುನಾಡು) ತಲಾ 8.5 ಅಂಕಗಳನ್ನು ಗಳಿಸುವ ಮೂಲಕ ಕ್ರಮವಾಗಿ 1,00,000 ರೂ. ಮತ್ತು 80,000 ರೂ. ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು.