ಅಫ್ಘಾನಿಸ್ತಾನಕ್ಕೆ 289 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್
110 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ಕಿವೀಸ್
PHOTO : Cricketworldcup.com
ಚೆನ್ನೈ: ಇಲ್ಲಿನ ಚೆಪಾಕ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ ಆಫ್ಘಾನಿಸ್ತಾನದ ಗೆಲುವಿಗೆ 289 ರನ್ ಗುರಿ ನೀಡಿದೆ.
ಸ್ಪಿನ್ನರ್ ಗಳಿಗೆ ಹೆಚ್ಚು ಅನುಕೂಲ ಕಲ್ಪಿಸುವ ಚೆಪಾಕ್ ಪಿಚ್ ನಲ್ಲಿ, ಟಾಸ್ ಗೆದ್ದ ಆಫ್ಘಾನಿಸ್ತಾನ ನಾಯಕ ಅಶ್ಮಾತುಲ್ಲಾ ಶಾಹೀದಿ ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಬಂದ ನ್ಯೂಝಿಲ್ಯಾಂಡ್ ಬ್ಯಾಟರ್ ಡೇವೂನ್ ಕಾನ್ವೇ 20 ರನ್ ಗಳಿಸಿ ಮುಜೀಬ್ ಬೌಲಿಂಗ್ ನಲ್ಲಿ ಔಟ್ ಆದರೆ ನಾಯಕ ಕೇನ್ ವಿಲಿಯಮ್ಸನ್ ಬದಲಿಗೆ ಆಡುವ 11 ರ ಬಳಗದಲ್ಲಿ ಕಾಣಿಸಿಕೊಂಡ ವಿಲ್ ಯಂಗ್ 4 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಬಾರಿಸಿದರು.
ಅರ್ಧಶತಕ ಬಾರಿಸಿ ಬ್ಯಾಟ್ ಮಾಡುತ್ತಿದ್ದ ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ರನ್ನು ಒಂದೇ ಓವರ್ ನಲ್ಲಿ ಔಟ್ ಮಾಡಿದ ಅಜ್ಮಾತುಲ್ಲಾ ಒಮರ್ಜೈ ನ್ಯೂಝಿಲ್ಯಾಂಡ್ ಅಗ್ರಕ್ರಮಾಂಕ ವನ್ನು ಪೆವಿಲಿಯನ್ ಗೆ ಕಳುಹಿಸಿದರು. ಅವರಿಗೆ ಸಾಥ್ ನೀಡಿದ ಸ್ಪಿನ್ನರ್ ರಶೀದ್ ಖಾನ್ ಮುಂದಿನ ಓವರ್ ನಲ್ಲಿಯೇ ಡರಲ್ ಮಿಚೆಲ್ ರನ್ನು 1 ರನ್ ಗೆ ಔಟ್ ಮಾಡಿದರು. 110 ರನ್ ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟ ಕ್ಕೆ ಸಿಲುಕಿದ್ದ ನ್ಯೂಝಿಲ್ಯಾಂಡ್ ಗೆ ನಾಯಕ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ ಪರಸ್ಪರ ಅರ್ಧಶತಕ ಗಳಿಸುವ ಮೂಲಕ ಆಸರೆಯಾದರು.
ಟಾಮ್ ಲಾಥಮ್ 70 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 68 ರನ್ ಬಾರಿಸಿದರೆ, ಗ್ಲೇನ್ ಫಿಲಿಪ್ಸ್ 79 ಎಸೆತಗಳಲ್ಲಿ 4 ಬೌಂಡರಿ 4ಸಿಕ್ಸರ್ ಸಹಿತ 71 ಗಳಿಸುವ ಮೂಲಕ ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಡೆದರು. ಆದರೆ ಮತ್ತೆ ನ್ಯೂಝಿಲ್ಯಾಂಡ್ ನ್ನು ಕಟ್ಟಿಹಾಕಿದ ನವೀನ್ ಉಲ್ ಹಕ್ 48 ನೇ ಓವರ್ ನಲ್ಲಿ ಟಾಮ್ ಲಾಥಮ್ ಹಾಗೂ ಗ್ಲೇನ್ ಫಿಲಿಪ್ಸ್ ಔಟ್ ಮಾಡುವ ಮೂಲಕ ತಂಡ ಮುನ್ನೂರ ಗಡಿ ದಾಟುವುದನ್ನು ತಡೆದರು. ಕಡೇ ಕ್ಷಣದಲ್ಲಿ ಮಾರ್ಕ್ ಚಾಪ್ಮನ್ 25 ಬಾರಿದರೆ ಸಾಂಟ್ನರ್ 7 ರನ್ ಗಳಿಸಿದರು.
ನ್ಯೂಝಿಲ್ಯಾಂಡ್ ವಿರುದ್ಧ ಅಜ್ಮಾತುಲ್ಲಾ ಒಮರ್ಜೈ, ನವೀನ್ ಉಲ್ ಹಕ್ 2 ವಿಕೆಟ್ ಪಡೆದರೆ ಮುಜೀಬ್ ಉರ್ ರೆಹಮಾನ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.