ಟಿ20 ಪಂದ್ಯದಲ್ಲಿ 16 ಸಿಕ್ಸರ್ ಬಾರಿಸಿದ ನ್ಯೂಝಿಲ್ಯಾಂಡ್ ನ ಫಿನ್ ಅಲೆನ್!
ವಿಶ್ವ ದಾಖಲೆ ಸರಿಗಟ್ಟಿದ ನ್ಯೂಝಿಲ್ಯಾಂಡ್ ನ ಬ್ಯಾಟರ್
ಫಿನ್ ಅಲೆನ್ | Photo: PTI
ಲೋಗನ್ ಪಾರ್ಕ್ (ನ್ಯೂಝಿಲ್ಯಾಂಡ್) : ನ್ಯೂಝಿಲ್ಯಾಂಡ್ ಆರಂಭಿಕ ಆಟಗಾರ ಫಿನ್ ಅಲೆನ್ ಅವರು ಪಾಕಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ 62 ಎಸೆತಗಳಲ್ಲಿ 5 ಬೌಂಡರಿ ಮತ್ತು 16 ಸಿಕ್ಸರ್ ಗಳೊಂದಿಗೆ 137 ರನ್ ಗಳಿಸಿ ಈ ಹಿಂದಿನ ವಿಶ್ವದಾಖಲೆ ಸಾಧನೆ ಸರಿಗಟ್ಟಿದ್ದಾರೆ.
ಮೂರನೇ ಟಿ20 ಪಂದ್ಯದಲ್ಲಿ ಮಿಂಚಿದ ಫಿನ್ ಅಲೆನ್ ಕೇವಲ 62 ಎಸೆತಗಳಲ್ಲಿ 5 ಬೌಂಡರಿ ಸಹಿತ 16 ಸಿಕ್ಸರ್ ಗಳೊಂದಿಗೆ 137 ರನ್ ಗಳಿಸಿದ್ದು, ಈ ಅನುಕ್ರಮದಲ್ಲಿ ವಿಶ್ವದಾಖಲೆ ಮುರಿಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರೂ, ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದಕ್ಕೂ ಮೊದಲು ಅಫ್ಘಾನಿಸ್ತಾನದ ಬ್ಯಾಟರ್ ಹಝರತುಲ್ಲಾ ಝಝೈ ಅವರು ಟಿ20 ಪಂದ್ಯದ ಇನ್ನಿಂಗ್ಸ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಐರ್ಲೆಂಡ್ ವಿರುದ್ಧ 2019ರಲ್ಲಿ ಟಿ20 ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ನ್ಯೂಝಿಲ್ಯಾಂಡ್ ನ ಫಿನ್ ಅಲೆನ್ ಅವರ ಝಝೈ ಅವರ ಜೊತೆ ಸಾಧನೆ ಹಂಚಿಕೊಂಡಿದ್ದಾರೆ.
Next Story