ವಿಶ್ವಕಪ್ : ನ್ಯೂಝಿಲ್ಯಾಂಡ್ ಗೆಲುವಿಗೆ ಕಡಿವಾಣ ಹಾಕುವುದೇ ಅಫ್ಘಾನಿಸ್ತಾನ?
ಟಾಸ್ ಗೆದ್ದ ಅಫ್ಘಾನ್, ಫೀಲ್ಡಿಂಗ್ ಆಯ್ಕೆ
PHOTO : CRICKETWORLDCUP.COM
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.
ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿದ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಅಫ್ಘಾನಿಸ್ತಾನ ಚೆನ್ನೈನ ಚೆಪಾಕ್ ಕ್ರೀಡಾಂಗಣದ ಪಿಚ್ ಚೆನ್ನಾಗಿ ಅರ್ಥೈಸಿಕೊಂಡು, ಯೋಜನೆ ಸಿದ್ಧಪಡಿಸಿಕೊಂಡಂತೆ ಕಾಣುತ್ತಿದೆ. ಚೆಪಾಕ್ ನ ಪಿಚ್ ಬೌಲಿಂಗ್ ಗೆ ಸಹಕಾರಿಯಾಗಿದ್ದು, ಬ್ಯಾಟರ್ ಗಳಿಗೆ ರನ್ ಗಳಿಕೆಗೆ ತಡೆಯೊಡ್ಡುತ್ತದೆ. ಸ್ಪಿನ್, ವೇಗದ ಬೌಲರ್ ಗಳಿಗೆ ಈ ಪಿಚ್ ನಲ್ಲಿ ಉತ್ತಮ ಬೌಲಿಂಗ್ ನಡೆಸಲು ಸಹಕಾರಿಯಾಗಿದೆ.
ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದಿರುವ ನ್ಯೂಝಿಲ್ಯಾಂಡ್ ಸಧ್ಯ ಪಟ್ಟಿಯಲ್ಲಿರುವ ಬಲಿಷ್ಠ ತಂಡಗಳಲ್ಲಿ 2 ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಮೂರು ಪಂದ್ಯಗಳಲಿ ಒಂದನ್ನು ಮಾತ್ರ ಗೆದ್ದುಕೊಂಡಿದೆ. ಆಕ್ರಮಣಕಾರಿ ಸ್ಪಿನ್ ಹಾಗೂ ವೇಗದ ಬೌಲಿಂಗ್ ಅಫ್ಘಾನಿಸ್ತಾನದ ಧನಾತ್ಮಕ ಅಂಶ. ಆಲ್ ರೌಂಡರ್ಗಳನ್ನು ಹೊಂದಿರುವ ನ್ಯೂಝಿಲ್ಯಾಂಡ್ ಗೆಲುವಿನ ಓಟಕ್ಕೆ ಅಫ್ಘಾನಿಸ್ತಾನ ಕಡಿವಾಣ ಹಾಕಬಹುದೇ ಎನ್ನುವ ನಿರೀಕ್ಷೆ ಕ್ರಿಕೆಟ್ ಪ್ರೇಮಿಗಳಲ್ಲಿದೆ.