ಏಕದಿನ ಬೌಲಿಂಗ್ ರ‍್ಯಾಂಕಿಂಗ್: ನಂ.1 ಸ್ಥಾನಕ್ಕೆ ಮರಳಿದ ಮುಹಮ್ಮದ್ ಸಿರಾಜ್
ಏಶ್ಯಕಪ್ ನಲ್ಲಿ ನೀಡಿದ ಶ್ರೇಷ್ಠ ಪ್ರದರ್ಶನಕ್ಕೆ ಸಂದ ಗೌರವ
ಹೊಸದಿಲ್ಲಿ: ಶ್ರೀಲಂಕಾ ವಿರುದ್ಧ ರವಿವಾರ ನಡೆದ ಏಶ್ಯಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಮತ್ತೊಮ್ಮೆ ವಿಶ್ವದ ನಂ.1 ಏಕದಿನ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಸಿರಾಜ್ ಎರಡನೇ ಬಾರಿ ನಂ.1 ಸ್ಥಾನಕ್ಕೇರಿದ್ದಾರೆ. ಈ ಹಿಂದೆ 2023 ರ ಜನವರಿ ಹಾಗೂ ಮಾರ್ಚ್ ನಡುವೆ ಅಗ್ರ ಸ್ಥಾನದಲ್ಲಿದ್ದರು. ನಂತರ ನಂ.1 ಸ್ಥಾನ ಆಸ್ಟ್ರೇಲಿಯದ ಜೋಶ್ ಹೇಝಲ್ ವುಡ್ ಪಾಲಾಯಿತು.
ಏಶ್ಯಕಪ್ ನಲ್ಲಿ 12.20ರ ಸರಾಸರಿಯಲ್ಲಿ ಹತ್ತು ವಿಕೆಟ್ ಗಳನ್ನು ಕಬಳಿಸಿದ ನಂತರ ಸಿರಾಜ್ ರ್ಯಾಂಕಿಂಗ್ನ ನಲ್ಲಿ ಎಂಟು ಸ್ಥಾನ ಭಡ್ತಿ ಪಡೆದಿದ್ದಾರೆ.
21 ರನ್ ಗೆ 6 ವಿಕೆಟ್ ಕಬಳಿಸಿದ್ದ ಸಿರಾಜ್ ಶ್ರೀಲಂಕಾವನ್ನು ಏಶ್ಯಕಪ್ ಫೈನಲ್ ನಲ್ಲಿ 50 ರನ್ಗಳಿಗೆ ಆಲೌಟ್ ಮಾಡಲು ಪ್ರಮುಖ ಪಾತ್ರವಹಿಸಿದ್ದರು. ಒಂದೇ ಓವರ್ ನಲ್ಲಿ ನಾಲ್ಕು-ವಿಕೆಟ್ ಗಳನ್ನು ಕಬಳಿಸಿದ್ದ ಸಿರಾಜ್ ಅವರು ಡ್ರೀಮ್ ಸ್ಪೆಲ್ ಎಸೆದಿದ್ದರು.
Next Story