ಟೀಮ್ ಇಂಡಿಯಾಕ್ಕೆ 273 ರನ್ ಗುರಿ ನೀಡಿದ ಅಫ್ಘಾನಿಸ್ತಾನ
ಜಸ್ಪ್ರೀತ್ ಬೂಮ್ರಾಗೆ 4 ವಿಕೆಟ್, ಪಾಂಡ್ಯಗೆ 2
PHOTO : cricketworldcup.com
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 9ನೇ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಅಫ್ಘಾನಿಸ್ತಾನ ತಂಡ 273 ರನ್ ಗಳ ಗುರಿ ಸಾಧಾರಣ ನೀಡಿದೆ.
ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಕ್ರೀಸ್ ಗೆ ಬಂದ ಅಫ್ಘಾನ್ ಬ್ಯಾಟರ್ಸ್ ಸಾಧಾರಣ ಆರಂಭ ನೀಡಿದರು. ಇಬ್ರಾಹೀಂ ಝರ್ದಾನ್ 22 ರನ್ ಗಳಿಸಿರುವಾಗ 6.4 ಓವರ್ ನಲ್ಲಿ ಜಸ್ಪ್ರಿತ್ ಬೂಮ್ರ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚ್ ನೀಡಿ ಔಟ್ ಆದರು.
ರಹ್ಮನುಲ್ಲಾ ಗುರ್ಬಜ್ 21 ರನ್ ಗೆ ಹಾರ್ದಿಕ್ ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ರಹಮತ್ ಶಾ 16 ರನ್ ಗೆ ಶಾರ್ದೂಲ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಆಗಿ ನಿರಾಸೆ ಮೂಡಿಸಿದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಹಸ್ಮ ತುಲ್ಲಾ ಶಾಹಿದಿ ಮತ್ತು ಒಮರ್ಜೈ 121 ರನ್ ಗಳ ಜೊತೆಯಾಟ ತಂಡಕ್ಕೆ ರನ್ ಗಳಿಕೆಗೆ ಅಡಿಪಾಯ ಹಾಕಿದರು.
ಒಮರ್ಜೈ (62 ) ಅರ್ಧಶತಕ ಗಳಿಸಿ ಪಾಂಡ್ಯ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು. ಹಸ್ಮತುಲ್ಲಾ ಶಾಹಿದಿ ನಿರ್ಣಾಯಕ 80 ರನ್ ಕೊಡುಗೆ ನೀಡಿದರು. ಒಂದೇ ಓವರ್ ಅನುಭವಿ ಮುಹಮ್ಮದ್ ನಬಿ ( 19) ಹಾಗು ನಜಿಬುಲ್ಲಾ (2) ಗೆ ವಿಕೆಟ್ ಕಬಳಿಸಿದ ಬೂಮ್ರ ಅಫ್ಘಾನ್ ರನ್ ದಾಹಕ್ಕೆ ಬ್ರೇಕ್ ಹಾಕಿದರು. ಬಳಿಕ ಬ್ಯಾಟಿಂಗ್ ಬಂದ ರಶೀದ್ ಖಾನ್ ಮುಜೀಬ್ ಉರ್ ರೆಹಮಾನ್ ನವೀನ್ ಉಲ್ ಹಕ್ ಕ್ರಮವಾಗಿ 16,10,9 ಗಳಿಸಿ ರನ್ ಪೇರಿಸಲು ಉಪಯುಕ್ತ ರನ್ ಜೋಡಿಸಿದರು.
ಟೀಮ್ ಇಂಡಿಯಾ ಪರ ಜಸ್ಪ್ರಿತ್ ಬೂಮ್ರ 39 ರನ್ ಗೆ 4 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ತೋರಿದರೆ ಹಾರ್ದಿಕ್ ಪಾಂಡ್ಯ 43 ರನ್ ಗೆ 2 ವಿಕೆಟ್ ಪಡೆದರು. ಶಾರ್ದೂಲ್ ಒಂದು ವಿಕೆಟ್ ಕಬಳಿಸಿದರು.