ಏಕದಿನ ವಿಶ್ವಕಪ್ : 50 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಮುಹಮ್ಮದ್ ಶಮಿ
ಮುಹಮ್ಮದ್ ಶಮಿ | PHOTO: @BCCI | X
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ 2023 ಸೆಮಿಫೈನಲ್ ನಲ್ಲಿ ಮುಹಮ್ಮದ್ ಶಮಿ ಏಕದಿನ ವಿಶ್ವಕಪ್ ನಲ್ಲಿ 50 ವಿಕೆಟ್ ಗಳನ್ನು ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮುಹಮ್ಮದ್ ಶಮಿ 32.2 ಓವರ್ ನಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಔಟ್ ಮಾಡುವ ಮೂಲಕ ಶಮಿ ಈ ಮೈಲಿಗಲ್ಲನ್ನು ತಲುಪಿದರು.
ಈ ಸಾಧನೆಯೊಂದಿಗೆ, ಮುಹಮ್ಮದ್ ಶಮಿ ವಿಶ್ವಕಪ್ ಪಂದ್ಯಾವಳಿಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿ ಸೇರಿದ್ದಾರೆ. ಗ್ಲೆನ್ ಮೆಕ್ಗ್ರಾತ್ (71 ವಿಕೆಟ್), ಮುತ್ತಯ್ಯ ಮುರಳೀಧರನ್ (68 ವಿಕೆಟ್), ಮಿಚೆಲ್ ಸ್ಟಾರ್ಕ್ (59 ವಿಕೆಟ್), ಲಸಿತ್ ಮಾಲಿಂಗ (56 ವಿಕೆಟ್), ವಾಸಿಂ ಅಕ್ರಮ್ (55 ವಿಕೆಟ್), ಮತ್ತು ಟ್ರೆಂಟ್ ಬೌಲ್ಟ್ (53 ವಿಕೆಟ್) ಪಡೆದಿದ್ದಾರೆ. ಶಮಿ ಅವರ ಸಾಧನೆಯು ಜಾಗತಿಕ ಮಟ್ಟದಲ್ಲಿ ಭಾರತದ ಬೌಲಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಕಿದೆ.
ಮುಹಮ್ಮದ್ ಶಮಿ ಏಕದಿನ ವಿಶ್ವಕಗಳಲ್ಲಿ 50 ವಿಕೆಟ್ ಗಳ ಗಡಿಯನ್ನು ತಲುಪಿಪಲು ಕಡಿಮೆ ಇನ್ನಿಂಗ್ಸ್, ಮತ್ತು 50 ವಿಕೆಟ್ ಗಳನ್ನು ಪಡೆಯಲು ತೆಗೆದುಕೊಂಡ ಕಡಿಮೆ ಎಸೆತಗ ತೆಗೆದುಕೊಂಡ ಅತಿವೇಗದ ಬೌಲರ್ ಎಂಬ ದಾಖಲೆ ಬರೆದರು. ಶಮಿ ಕೇವಲ 17 ಇನ್ನಿಂಗ್ಸ್ ಗಳಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದರು, ಮಿಚೆಲ್ ಸ್ಟಾರ್ಕ್ 19, ಲಸಿತ್ ಮಾಲಿಂಗ 25 ಹಾಗೂ ಟ್ರೆಂಟ್ ಬೌಲ್ಟ್ 28 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದರು.
50ನೇ ವಿಕೆಟ್ ಪಡೆಯಲು ಶಮಿ ತೆಗೆದುಕೊಂಡ ಎಸೆತ 795 , ನಂತರ ಮಿಚೆಲ್ ಸ್ಟಾರ್ಕ್ (941 ಎಸೆತಗಳು), ಲಸಿತ್ ಮಾಲಿಂಗ (1187 ಎಸೆತಗಳು), ಗ್ಲೆನ್ ಮೆಕ್ಗ್ರಾತ್ (1540 ಎಸೆತಗಳು), ಟ್ರೆಂಟ್ ಬೌಲ್ಟ್ (1543 ಎಸೆತಗಳು)