ಟಿ-20 | ಝಿಂಬಾಬ್ವೆ ವಿರುದ್ಧ ಪಾಕಿಸ್ತಾನಕ್ಕೆ ಭರ್ಜರಿ ಗೆಲುವು
PC : AP
ಬುಲಾವಯೊ : ಪಾಕಿಸ್ತಾನ ಕ್ರಿಕೆಟ್ ತಂಡವು ಆತಿಥೇಯ ಝಿಂಬಾಬ್ವೆ ವಿರುದ್ಧದ ಮೊದಲ ಟಿ-20 ಅಂತರ್ರಾಷ್ಟ್ರೀಯ ಪಂದ್ಯವನ್ನು 57 ರನ್ ಅಂತರದಿಂದ ಗೆದ್ದುಕೊಂಡಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರವಿವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಪಾಕಿಸ್ತಾನ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 165 ರನ್ ಗಳಿಸಿತು. ತಯ್ಯಬ್ ತಾಹಿರ್(ಔಟಾಗದೆ 39) ಹಾಗೂ ಉಸ್ಮಾನ್ ಖಾನ್(39 ರನ್, 30 ಎಸೆತ)ಅಮೂಲ್ಯ ಕೊಡುಗೆ ನೀಡಿದರು.
ಗೆಲ್ಲಲು 166 ರನ್ ಗುರಿ ಪಡೆದ ಝಿಂಬಾಬ್ವೆ ತಂಡವು 15.3 ಓವರ್ಗಳಲ್ಲಿ 108 ರನ್ ಗಳಿಸಿ ಆಲೌಟಾಯಿತು. ನಾಯಕ ಸಿಕಂದರ್ ರಝಾ(39 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಪಾಕ್ ಪರ ಸುಫಿಯಾನ್ ಮುಕೀಮ್(3-20)ಹಾಗೂ ಅಬ್ರಾರ್ ಅಹ್ಮದ್ (3-28)ತಲಾ 3 ವಿಕೆಟ್ಗಳನ್ನು ಪಡೆದರು.
Next Story