28ನೇ ವರ್ಲ್ಡ್ ಬಿಲಿಯರ್ಡ್ಸ್ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸಿದ ಭಾರತದ ಪಂಕಜ್ ಅಡ್ವಾಣಿ
ಪಂಕಜ್ ಅಡ್ವಾಣಿ | PC : X/@PankajAdvani247
ಹೊಸದಿಲ್ಲಿ: ಭಾರತದ ಬಿಲಿಯರ್ಡ್ಸ್ ಪಂಕಜ್ ಅಡ್ವಾಣಿ ದೋಹಾದ ಖತರ್ನಲ್ಲಿ ಶನಿವಾರ ಐಬಿಎಸ್ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ ತನ್ನ 28ನೇ ವಿಶ್ವ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಇಂಗ್ಲೆಂಡ್ನ ರಾಬರ್ಟ್ ಹಾಲ್ ಅವರನ್ನು 4-2 ಅಂತರದಿಂದ ಮಣಿಸಿದ ಅಡ್ವಾಣಿ ಸತತ 7ನೇ ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಜಯ ಸಾಧಿಸಿ, ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಅಡ್ವಾಣಿ ಫೈನಲ್ನಲ್ಲಿ ಇಂಗ್ಲೆಂಡ್ನ ರಾಬರ್ಟ್ ಹಾಲ್ರಿಂದ ಪ್ರಬಲ ಸವಾಲು ಎದುರಿಸಿದರು. ಹಾಲ್ ಆರಂಭಿಕ ಮುನ್ನಡೆ ಪಡೆದು ಮೊದಲ ಫ್ರೇಮ್ ಅನ್ನು ಗೆದ್ದುಕೊಂಡರು. ಆದರೆ ಅಡ್ವಾಣಿ ತಕ್ಷಣವೇ ಹಿಡಿತ ಸಾಧಿಸಿದ್ದು, ಎರಡನೇ ಫ್ರೇಮ್ನಲ್ಲಿ 150 ಪಾಯಿಂಟ್ ತಲುಪಿದರು.
ಮೂರನೇ ಫ್ರೇಮ್ನಲ್ಲಿ ಉಭಯ ಫೈನಲಿಸ್ಟ್ಗಳು ತೀವ್ರ ಪೈಪೋಟಿ ನಡೆಸಿದ್ದು, ಅಡ್ವಾಣಿ ಈ ಹಣಾಹಣಿಯಲ್ಲಿ ಜಯಶಾಲಿಯಾಗಿ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆ ಇಟ್ಟರು. ಆದರೆ, ಹಾಲ್ ಸುಲಭವಾಗಿ ಸೋಲೊಪ್ಪಿಕೊಳ್ಳಲು ನಿರಾಕರಿಸಿದರು.
ಹಾಲ್ 4ನೇ ಫ್ರೇಮ್ನಲ್ಲಿ 151 ಅಂಕ ಗಳಿಸಿದರು. ಇದರೊಂದಿಗೆ ತನ್ನ ಚಾಂಪಿಯನ್ಶಿಪ್ ವಿಶ್ವಾಸವನ್ನು ಉಳಿಸಿಕೊಂಡರು. 5ನೇ ಫ್ರೇಮ್ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿ 154 ಪಾಯಿಂಟ್ಸ್ ಗಳಿಸಿದರು. ಆ ಮೂಲಕ ಸ್ಕೋರನ್ನು ಸಮಬಲಗೊಳಿಸಿದರು. ಅಡ್ವಾಣಿಗೆ ಒತ್ತಡ ಹೆಚ್ಚಿಸಿದರು.
ನಿರ್ಣಾಯಕ ಆರನೇ ಫ್ರೇಮ್ನಲ್ಲಿ ಅಡ್ವಾಣಿ ತನ್ನ ಚಾಂಪಿಯನ್ಶಿಪ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಭಾರತೀಯ ಮಾಂತ್ರಿಕ ಗೆಲುವಿಗೆ ಅಗತ್ಯವಾದ ಅಂತಿಮ ಅಂಕ ಗಳನ್ನು ಗಳಿಸಿದರು.
ಸಿಂಗಾಪುರದ ಪೀಟರ್ ಗಿಲ್ಕ್ರಿಸ್ಟ್ ಹಾಗೂ ಭಾರತದ ಸೌರವ್ ಕೊಥಾರಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಹಂಚಿಕೊಂಡರು.