26ನೇ ಬಾರಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ ಜಯಿಸಿದ ಪಂಕಜ್ ಅಡ್ವಾಣಿ
Photo: Pankaj Advani/X
ದೋಹಾ : ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ದೋಹಾದಲ್ಲಿ ಮಂಗಳವಾರ ಐಬಿಎಸ್ಎಫ್ ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ 26ನೇ ಬಾರಿ ಪ್ರಶಸ್ತಿ ಬಾಚಿಕೊಂಡು ದೇಶಕ್ಕೆ ಹೆಮ್ಮೆ ತಂದರು. ಫೈನಲ್ನಲ್ಲಿ ತಮ್ಮದೇ ದೇಶದ ಸೌರವ್ ಕೊಥಾರಿ ಅವರನ್ನು ಸೋಲಿಸಿ ಈ ಸಾಧನೆ ಮಾಡಿದರು.
ಮೊದಲ ಒಂದು ಗಂಟೆಯ ಆಟದಲ್ಲಿ 26-180ರಿಂದ ಹಿನ್ನಡೆಯಲ್ಲಿದ್ದ ಅಡ್ವಾಣಿ 2018ರ ವಿಶ್ವ ಚಾಂಪಿಯನ್ ಕೊಥಾರಿ ಅವರನ್ನು 1000-416 ಅಂತರದಿಂದ ಮಣಿಸಿದರು. ಕಳೆದ ವರ್ಷ ಕೌಲಾಲಂಫುರದಲ್ಲಿ ಕೂಡ ಈ ಇಬ್ಬರು ಫೈನಲ್ನಲ್ಲಿ ಸೆಣಸಾಡಿದ್ದರು.
ಸುಮಾರು 5 ಗಂಟೆಗಳ ಕಾಲ ನಡೆದಿದ್ದ ಸೆಮಿ ಫೈನಲ್ನಲ್ಲಿ ಕೊಥಾರಿ ಅವರು ಧ್ರುವ್ ಸಿಟ್ವಾಲಾರನ್ನು 900-756 ಅಂತರದಿಂದ ಮಣಿಸಿದ್ದರು. ಮತ್ತೊಂದು ಸೆಮಿ ಫೈನಲ್ನಲ್ಲಿ ಅಡ್ವಾಣಿ ಅವರು ಭಾರತದ ಇನ್ನೋರ್ವ ಸ್ಪರ್ಧಿ ರೂಪೇಶ್ ಶಾರನ್ನು 900-273 ಅಂತರದಿಂದ ಸೋಲಿಸಿದ್ದರು.
38ರ ಹರೆಯದ ಅಡ್ವಾಣಿ 2003ರಲ್ಲಿ ತನ್ನ ಮೊದಲ ವಿಶ್ವ ಪ್ರಶಸ್ತಿಯನ್ನು ಜಯಿಸಿದ್ದರು
Next Story