ಪ್ಯಾರಿಸ್ ಮಾಸ್ಟರ್ಸ್: ಜೊಕೊವಿಕ್ ಫೈನಲ್ಗೆ
Photo: twitter.com/DjokovicFan_
ಪ್ಯಾರಿಸ್ : ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ರಶ್ಯದ ಐದನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೆವ್ರನ್ನು ಮಣಿಸಿ ಏಳನೇ ಬಾರಿ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸರ್ಬಿಯದ ಆಟಗಾರ ಜೊಕೊವಿಕ್ ಅವರು ರುಬ್ಲೇವ್ರನ್ನು 5-7, 7-6(3), 7-5 ಸೆಟ್ಗಳ ಅಂತರದಿಂದ ಸೋಲಿಸಿದರು.
ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ರನ್ನು ಎದುರಿಸಲಿದ್ದಾರೆ.
ಡಿಮಿಟ್ರೊವ್ ಗ್ರೀಕ್ನ 7ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್ಸಿಪಾಸ್ರನ್ನು 6-3, 6-7(1), 7-6(3)ಸೆಟ್ಗಳ ಅಂತರದಿಂದ ಮಣಿಸಿದರು. ಎರಡನೇ ಬಾರಿ ಎಟಿಪಿ ಮಸ್ಟರ್ಸ್ 1000 ಟೂರ್ನಿಯಲ್ಲಿ ಫೈನಲ್ಗೆ ತಲುಪಿದರು. 2017ರ ನಂತರ ಈ ಸಾಧನೆ ಮಾಡಿದ ಡಿಮಿಟ್ರೋವ್ ಆರು ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಅಗ್ರ ಶ್ರೇಯಾಂಕದ ಜೊಕೊವಿಕ್ ಈ ಹಿಂದೆ ರಶ್ಯ ಆಟಗಾರ ರುಬ್ಲೆವ್ರನ್ನು 5 ಪಂದ್ಯಗಳಲ್ಲಿ 4 ಬಾರಿ ಸೋಲಿಸಿದ್ದರು.