ಪ್ಯಾರಿಸ್ ಒಲಿಂಪಿಕ್ಸ್ | ಚಿನ್ನಕ್ಕಾಗಿ ಜೊಕೊವಿಕ್- ಅಲ್ಕರಾಝ್ ಸೆಣಸು
PC: x.com/TheTennisLetter
ಪ್ಯಾರೀಸ್: ಒಲಿಂಪಿಕ್ ಕ್ರೀಡಾಕೂಟದ ಪುರುಷರ ಟೆನಿಸ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕದ ಸೆರ್ಬಿಯಾದ ನೊವಾಕ್ ಜೊಕೊವಿಕ್ ಅವರು ರೊನಾಲ್ಡ್ ಗಾರೋಸ್ ನಲ್ಲಿ ನಡೆದ ಸೆಮಿಫೈನಲ್ ಕದನದಲ್ಲಿ ಲೊರೆನ್ಸೊ ಮುಸೆಟ್ಟಿಯವರನ್ನು 6-4, 6-2 ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ತಲುಪಿದ್ದಾರೆ.
ಈಗಾಗಲೇ ದಾಖಲೆ ಸಂಖ್ಯೆಯ ಅಂದರೆ 24 ಗ್ರ್ಯಾಂಡ್ ಸ್ಲಾಂಗಳನ್ನು ಗೆದ್ದಿರುವ ಜೊಕೊವಿಕ್ ಫೈನಲ್ ನಲ್ಲಿ ಕಾರ್ಲೋಸ್ ಅಲ್ಕರಾಝ್ ಅವರ ಸವಾಲು ಎದುರಿಸಲಿದ್ದಾರೆ. ಈ ಬ್ಲಾಕ್ಬಸ್ಟರ್ ಪುರುಷರ ಸಿಂಗಲ್ಸ್ ಗಾಗಿ ಇಡೀ ವಿಶ್ವದ ಟೆನಿಸ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಸೆಮಿಫೈನಲ್ ನಲ್ಲಿ 11ನೇ ಶ್ರೇಯಾಂಕದ ಇಟೆಲಿಯ ಲೊರೆನ್ಸೊ ಮುಸೆಟ್ಟಿ ಅಗ್ರ ಶ್ರೇಯಾಂಕಿತ ಆಟಗಾರನಿಗೆ ಯಾವುದೇ ಹಂತದಲ್ಲೂ ಸವಾಲಾಗಲಿಲ್ಲ.
ಕೂಟದಲ್ಲಿ ಭಾರತ ಏಳನೇ ದಿನ ನಾಲ್ಕನೇ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಶೂಟಿಂಗ್ ನಲ್ಲಿ ಮನು ಭಾಕರ್ ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್ ನಲ್ಲಿ ಆಡುತ್ತಿದ್ದಾರೆ. ಬಳಿಕ ನಿಶಾಂತ್ ದೇವ್ 71 ಕೆಜಿ ವಿಭಾಗದ ಕುಸ್ತಿ ಕ್ವಾರ್ಟರ್ ಫೈನಲ್ ನಲ್ಲಿ ಸೆಣೆಸುವರು. ಇಬ್ಬರ ಮೇಲೂ ದೇಶ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ.