ಏಶ್ಯನ್ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಮುಹ್ಸಿನ್ ನಖ್ವಿ ಆಯ್ಕೆ
Photo - indianexpress
ಕರಾಚಿ: ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ನೂತನ ಅಧ್ಯಕ್ಷರಾಗಿ ಮುಹ್ಸಿನ್ ನಖ್ವಿ ಗುರುವಾರ ಅಧಿಕೃತವಾಗಿ ಅಧಿಕಾರವಹಿಸಿಕೊಂಡರು. ಈ ಮೂಲಕ ಏಶ್ಯನ್ ಕ್ರಿಕೆಟ್ನಲ್ಲಿ ನಾಯಕತ್ವದ ಹೊಸ ಯುಗ ಆರಂಭವಾಗಿದೆ.
ನಖ್ವಿ 2024ರ ಫೆಬ್ರವರಿಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ)ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು ಪ್ರತಿಷ್ಠಿತ ಎಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
‘‘ಏಶ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತಿದೆ. ಏಶ್ಯವು ವಿಶ್ವ ಕ್ರಿಕೆಟ್ನ ಎದೆಬಡಿತವಾಗಿ ಉಳಿದಿದೆ. ಕ್ರಿಕೆಟ್ ಬೆಳವಣಿಗೆ ಹಾಗೂ ಜಾಗತಿಕ ಪ್ರಭಾವವನ್ನು ಹೆಚ್ಚಿಸಲು ಎಲ್ಲ ಸದಸ್ಯ ಮಂಡಳಿಗಳೊಂದಿಗೆ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಎಸಿಸಿಗೆ ನೀಡಿದ ಕೊಡುಗೆಗಾಗಿ ನಿರ್ಗಮಿತ ಎಸಿಸಿ ಅಧ್ಯಕ್ಷರಿಗೆ ನಾನು ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಅರ್ಪಿಸುತ್ತೇನೆ’’ ಎಂದು ನಖ್ವಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ಅವರಿಂದ ತೆರವಾದ ಸ್ಥಾನವನ್ನು ನಖ್ವಿ ತುಂಬಿದ್ದಾರೆ.