ಪೆರುಗಿಯಾ ಚಾಲೆಂಜ್ |ಸುಮಿತ್ ನಾಗಲ್ ಫೈನಲ್ಗೆ
ಸುಮಿತ್ ನಾಗಲ್ | PC: NDTV
ಹೊಸದಿಲ್ಲಿ : ಭಾರತದ ಅಗ್ರ ರ್ಯಾಂಕಿನ ಆಟಗಾರ ಸುಮಿತ್ ನಾಗಲ್ ಪೆರುಗಿಯಾ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಫೈನಲ್ಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ನಲ್ಲಿ ನಾಗಲ್ ಸ್ಪೇನ್ನ ಬೆರ್ನಾಬ್ ಝಪಾಟ ವಿರುದ್ಧ 7-6(7-2), 1-6, 6-2 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು.
ನಾಗಲ್ ಫೈನಲ್ನಲ್ಲಿ ಇಟಲಿಯ ಲುಸಿಯನೊ ಡಾರ್ಡೆರಿ ಅಥವಾ ಜರ್ಮನಿಯ ಡೇನಿಯಲ್ ಅಲ್ಟಾಮಯೆರ್ರನ್ನು ಎದುರಿಸಲಿದ್ದಾರೆ.
ಸದ್ಯ ಜೀವನಶ್ರೇಷ್ಠ 77ನೇ ರ್ಯಾಂಕಿನಲ್ಲಿರುವ 26ರ ಹರೆಯದ ನಾಗಲ್ ಮೊದಲ ಸುತ್ತಿನಲ್ಲಿ ಕಠಿನ ಸವಾಲು ಎದುರಿಸಿದರು. ಆದರೆ, ಟೈ ಬ್ರೇಕರ್ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಬೆರ್ನಾಬ್ ಎರಡನೇ ಸೆಟನ್ನು 6-1ರಿಂದ ಗೆದ್ದುಕೊಂಡು ತಿರುಗೇಟು ನೀಡಿದರು. ಆದರೆ 3ನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಪ್ರಬಲ ಪ್ರತಿ ಹೋರಾಟ ನೀಡಿದ ನಾಗಲ್ ಸ್ಪೇನ್ ಆಟಗಾರನ ವಿರುದ್ದ 3ನೇ ಮುಖಾಮುಖಿಯಲ್ಲಿ ಮೊದಲ ಗೆಲುವು ದಾಖಲಿಸಿದರು.
ನಾಗಲ್ ಜರ್ಮನಿಯ ಹೆಲ್ಬ್ರೊನ್ ಚಾಲೆಂಜರ್ ನಂತರ ಸತತ 9ನೇ ಗೆಲುವು ದಾಖಲಿಸಿದರು. ಇದೀಗ ಸತತ ಎರಡನೇ ಚಾಲೆಂಜರ್ ಪ್ರಶಸ್ತಿ ಗೆಲ್ಲುವ ಸ್ಪರ್ಧೆಯಲ್ಲಿದ್ದಾರೆ. ಈ ಪ್ರಶಸ್ತಿ ಗೆದ್ದರೆ ರ್ಯಾಂಕಿಂಗ್ನಲ್ಲಿ ಅಗ್ರ-50ಕ್ಕೆ ಏರಲಿದ್ದಾರೆ.