ವಿಶ್ವಕಪ್ ಫೈನಲ್ ವೀಕ್ಷಿಸಲಿರುವ ಪ್ರಧಾನಿ ಮೋದಿ, ಆಸ್ಟ್ರೇಲಿಯ ಉಪ ಪ್ರಧಾನಿ
Photo : cricketworldcup.com
ಗಾಂಧಿನಗರ : ಅಹಮದಾಬಾದ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯ ನಡುವೆ ರವಿವಾರ ನಡೆಯಲಿರುವ ಐಸಿಸಿ ಪುರುಷರ ವಿಶ್ವಕಪ್-2023ರ ಫೈನಲ್ ಪಂದ್ಯದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಉಪಸ್ಥಿತರಿರುತ್ತಾರೆ ಎಂದು ವರದಿಯಾಗಿದೆ.
ಭಾರತೀಯ ವಾಯುಪಡೆಯ(ಐಎಎಫ್)ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ರವಿವಾರ ಮಧ್ಯಾಹ್ನ ಪಂದ್ಯ ಆರಂಭವಾಗುವ ಮೊದಲು ಹಾಗೂ ಇನಿಂಗ್ಸ್ ವಿರಾಮದ ವೇಳೆ ಕ್ರೀಡಾಂಗಣದ ಮೇಲೆ ಏರ್ ಶೋ ನಡೆಸಲಿದೆ ಎಂದು ಶುಕ್ರವಾರ ಅಧಿಕೃತ ಹೇಳಿಕೆ ತಿಳಿಸಿದೆ.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶುಕ್ರವಾರ ಸಂಜೆ ಗಾಂಧಿನಗರದಲ್ಲಿ ಸಭೆ ನಡೆಸಿದ್ದು, ಬಹುನಿರೀಕ್ಷಿತ ಪಂದ್ಯಕ್ಕೆ ಮುನ್ನ ಭದ್ರತೆ, ಸಂಚಾರ ನಿರ್ವಹಣೆ ಹಾಗೂ ಶುಚಿತ್ವದ ಅಂಶಗಳನ್ನು ಪರಿಶೀಲಿಸಿದ್ದಾರೆ.
Next Story