ಚೆಸ್ ತಾರೆ ಡಿ ಗುಕೇಶ್ ಗೆ ರಾಷ್ಟ್ರಪತಿ ದ್ರೌಪದಿ ಮರ್ಮು, ಪ್ರಧಾನಿ ಮೋದಿ ಅಭಿನಂದನೆ
ವಿಶ್ವ ಚೆಸ್ ಚಾಂಪಿಯನ್ ಶಿಪ್ ಜಯಿಸಿದ ಕಿರಿಯ ಚೆಸ್ ಪಟು
ಹೊಸದಿಲ್ಲಿ : ಸಿಂಗಾಪುರದಲ್ಲಿ ಗುರುವಾರ ವಿಶ್ವ ಚೆಸ್ ಚಾಂಪಿಯನ್ ಶಿಪ್ ಜಯಿಸಿದ ಕಿರಿಯ ವಯಸ್ಸಿನ ಚೆಸ್ ತಾರೆ ಆಗಿ ಹೊರ ಹೊಮ್ಮಿರುವ ತಮಿಳುನಾಡಿನ ಚೆಸ್ ತಾರೆ ಗುಕೇಶ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಗುಕೇಶ್ ಡಿ. ಅವರ ಗಮನಾರ್ಹ ಸಾಧನೆಗಾಗಿ ಅಭಿನಂದನೆಗಳು. ಇದು ಅವರ ಅಪ್ರತಿಮ ಪ್ರತಿಭೆ, ಕಠಿಣ ಪರಿಶ್ರಮ ಹಾಗೂ ಅಚಲ ನಿರ್ಧಾರದ ಫಲ. ಇದು ಐತಿಹಾಸಿಕ ಹಾಗೂ ಅನುಕರಣೀಯ. ಅವರ ಗೆಲುವು ಚೆಸ್ ಇತಿಹಾಸದಲ್ಲಿ ಅವರ ಹೆಸರನ್ನು ಅಜರಾಮರವಾಗಿಸಿದ್ದಲ್ಲದೆ, ಯುವ ಮನಸ್ಸುಗಳು ದೊಡ್ಡ ಕನಸು ಕಾಣಲು ಹಾಗೂ ಶ್ರೇಷ್ಠ ಪ್ರದರ್ಶನ ನೀಡಲು ಪ್ರೇರೇಪಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರನಾಗಿರುವ ಗುಕೇಶ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಅವರು ಭಾರತಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. ಅವರ ವಿಜಯದ ಮೂಲಕ ಭಾರತವು ಚೆಸ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಅಮೋಘ ಪ್ರದರ್ಶನ ನೀಡಿರುವ ಗುಕೇಶ್ ಗೆ ಪ್ರತೀ ಭಾರತೀಯನ ಪರವಾಗಿ ನೀವು ಭವಿಷ್ಯದ ವೈಭವವನ್ನು ಉಳಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ರಾಷ್ಟ್ರಪತಿ ಎಕ್ಸ್‌ನಲ್ಲಿ ಬರೆದಿದ್ದಾರೆ.