ಬಾಂಗ್ಲಾ ವಿರುದ್ಧ 174 ರನ್ ಗಳಿಸಿದ ಕ್ವಿಂಟನ್ ಡಿʼಕಾಕ್
2023 ರ ವಿಶ್ವಕಪ್ ನಲ್ಲಿ ಮೂರು ಶತಕ ಬಾರಿಸಿದ ಮೊದಲ ಬ್ಯಾಟರ್ ಡಿʼಕಾಕ್
PHOTO : cricketworldcup.com
ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿ ಕಾಕ್ 174 ರನ್ ಗಳಿಸುವ ಮೂಲಕ 2023ರ ವಿಶ್ವಕಪ್ ನಲ್ಲಿ ಮೂರು ಶತಕ ದಾಖಲಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಬಾಂಗ್ಲಾದೇಶದ ವಿರುದ್ಧ 101 ಎಸೆತ ಗಳಲ್ಲಿ ಶತಕ ದಾಖಲಿಸಿದ ಡಿ ಕಾಕ್ ದಾಖಲೆ ಬರೆದರು. ವಿಶ್ವಕಪ್ ಟೂರ್ನಿಯಲ್ಲಿ ಮೂರು ಶತಕ ದಾಖಲಿಸಿದ 7 ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ, ಕುಮಾರ ಸಂಗಕ್ಕರ, ಸೌರವ್ ಗಂಗೂಲಿ ಆ ಪಟ್ಟಿಯಲ್ಲಿದ್ದಾರೆ.
ಕ್ವಿಂಟನ್ ಡಿʼಕಾಕ್ 140 ಎಸೆತಗಳಲ್ಲಿ 15 ಬೌಂಡರಿ, 7 ಸಿಕ್ಸರ್ ಗಳೊಂದಿಗೆ 174 ರನ್ ಗಳಿಸಿದ್ದಾಗ ಹಸನ್ ಮಹ್ಮೂದ್ ಎಸೆತದಲ್ಲಿ ಸಿಕ್ಸರ್ ಬಾರಿಸಲು ಹೋಗಿ ಬೌಂಡರಿ ಲೈನ್ ನಲ್ಲಿ ನಸೂಮ್ ಅಹ್ಮದ್ ಗೆ ಕ್ಯಾಚಿತ್ತು ಔಟ್ ಆದರು. ದಕ್ಷಿಣ ಆಫ್ರಿಕಾ 46 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿದೆ.
Next Story