ಪಾಕಿಸ್ತಾನ, ನೇಪಾಳ ವಿರುದ್ಧ ಏಶ್ಯಕಪ್ ಪಂದ್ಯಗಳಿಗೆ ರಾಹುಲ್ ಅಲಭ್ಯ: ದ್ರಾವಿಡ್
ರಾಹುಲ್ ದ್ರಾವಿಡ್
ಹೊಸದಿಲ್ಲಿ, ಆ.29: ವಿಕೆಟ್ ಕೀಪರ್-ಬ್ಯಾಟರ್ ಕೆ.ಎಲ್.ರಾಹುಲ್ ಏಶ್ಯಕಪ್ ನಲ್ಲಿ ಪಾಕಿಸ್ತಾನ ಹಾಗೂ ನೇಪಾಳ ವಿರುದ್ಧದ ಗ್ರೂಪ್ ಹಂತದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ರಾಹುಲ್ ಸಂಪೂರ್ಣ ಮ್ಯಾಚ್ ಫಿಟ್ನೆಸ್ ಪಡೆಯಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್ಸಿಎ)ಯಲ್ಲಿ ತರಬೇತಿ ನಡೆಸಲಿದ್ದಾರೆ.
ಸೆಪ್ಟಂಬರ್ 4ರಂದು ಟೂರ್ನಮೆಂಟ್ ನ ಸೂಪರ್-4 ಹಂತದಲ್ಲಿ ರಾಹುಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇಶಾನ್ ಕಿಶನ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ತಂಡದಲ್ಲಿ ಲಭ್ಯವಿರಲಿದ್ದು, ಕೇರಳದ ಸಂಜು ಸ್ಯಾಮ್ಸನ್ ಮೀಸಲು ಆಟಗಾರನಾಗಿ ತಂಡದೊಂದಿಗೆ ಇರಲಿದ್ದಾರೆ.
ಇನ್ನು 5 ವಾರಗಳಲ್ಲಿ ಆರಂಭವಾಗಲಿರುವ 2023ರ ಪುರುಷರ ಕ್ರಿಕೆಟ್ ವಿಶ್ವಕಪ್ ಗಿಂತ ಮೊದಲು ರಾಹುಲ್ ಸಾಕಷ್ಟು ಅಭ್ಯಾಸ ನಡೆಸಲಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.
ಏಶ್ಯಕಪ್ ಭಾರತ ಕ್ರಿಕೆಟ್ ತಂಡ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪ ನಾಯಕ), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಸಂಜು ಸ್ಯಾಮ್ಸನ್(ಮೀಸಲು ಆಟಗಾರ).