ವಿಶ್ವಕಪ್| ದಕ್ಷಿಣ ಆಫ್ರಿಕಾಗೆ ಆರಂಭಿಕ ಆಘಾತ; ಪಂದ್ಯಕ್ಕೆ ಮಳೆ ಅಡ್ಡಿ
Photo credit: cricketworldcup.com
ಕೋಲ್ಕತಾ: ಇಲ್ಲಿನ ಈಡೆನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯವನ್ನು ಕೆಳ ಸಮಯ ಸ್ಥಗಿತಗೊಳಿಸಲಾಗಿದೆ.
ಆಸೀಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಅಕ್ಷರಶಃ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಓಪನರ್ ಗಳಾದ ಕ್ವಿಂಟನ್ ಡಿಕಾಕ್, ನಾಯಕ ತೆಂಬಾ ಬಾವುಮ 3, 0 ಗೆ ಕ್ರಮವಾಗಿ ಹೇಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿದರು. ವಾನ್ ಡರ್ ಡುಸ್ಸೆನ್ 6 ರನ್, ಐಡೆನ್ ಮಾರ್ಕ್ರಾಮ್ 10 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಕ್ಲಾಸನ್ ಹಾಗೂ ಡೇವಿಡ್ ಮಿಲ್ಲರ್ ಕ್ರಮವಾಗಿ 10 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ 14 ಓವರ್ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಮಳೆ ಕಾಣಿಸಿಕೊಂಡಿದ್ದರಿಂದ ಪಂದ್ಯವನ್ನು ಅಂಪೈರ್ ನಿರ್ಧಾರದಂತೆ ಕೆಳ ಸಮಯ ಸ್ಥಗಿತಗೊಳಿಸಲಾಗಿದೆ.
ದಕ್ಷಿಣ ಆಫ್ರಿಕಾ 14 ಓವರ್ ಗಳಲ್ಲಿ 44 ರನ್ ಪೇರಿಸಿ ನಾಲ್ಕು ವಿಕೆಟ್ ಕಳೆದುಕೊಂಡಿದೆ.