ಮಳೆ ಕಾಟ: ಭಾರತ-ಪಾಕಿಸ್ತಾನ ನಡುವಿನ ಏಶ್ಯಕಪ್ ಸೂಪರ್-4 ಪಂದ್ಯ ಮೀಸಲು ದಿನಕ್ಕೆ ಮುಂದೂಡಿಕೆ
Photo: twitter \ @ICC
ಕೊಲಂಬೊ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯಕಪ್ನ ಸೂಪರ್-4 ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಈ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ.
ಸೋಮವಾರ ಪಂದ್ಯದಲ್ಲಿ ಓವರ್ ಕಡಿತ ಇರುವುದಿಲ್ಲ. 24.1ನೇ ಓವರ್ನಿಂದ ಪಂದ್ಯ ಮುಂದುವರಿಯಲಿದೆ. ಪ್ರೇಮದಾಸ ಸ್ಟೇಡಿಯಮ್ನಲ್ಲಿ ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತವು ಮಳೆಯಿಂದಾಗಿ ಪಂದ್ಯ ನಿಂತಾಗ 24.1 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 147 ರನ್ ಗಳಿಸಿತ್ತು.
ಕೆ.ಎಲ್.ರಾಹುಲ್(ಔಟಾಗದೆ 17) ಹಾಗೂ ವಿರಾಟ್ ಕೊಹ್ಲಿ(ಔಟಾಗದೆ 8) ಕ್ರೀಸ್ ಕಾಯ್ದುಕೊಂಡಿದ್ದರು. ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(56 ರನ್, 49 ಎಸೆತ, 6 ಬೌಂಡರಿ, 4 ಸಿಕ್ಸರ್)ಹಾಗೂ ಶುಭಮನ್ ಗಿಲ್(58 ರನ್, 52 ಎಸೆತ, 10 ಬೌಂಡರಿ)ಮೊದಲ ವಿಕೆಟ್ಗೆ 121 ರನ್ ಜೊತೆಯಾಟ ನಡೆಸಿ ಭರ್ಜರಿ ಆರಂಭ ಒದಗಿಸಿದರು.
ರೋಹಿತ್ ವಿಕೆಟ್ ಕಬಳಿಸಿದ ಸ್ಪಿನ್ನರ್ ಶಾದಾಬ್ ಖಾನ್ ಈ ಜೋಡಿಯನ್ನು ಬೇರ್ಪಡಿಸಿದರು. ಗಿಲ್ಗೆ ಅಫ್ರಿದಿ ಪೆವಿಲಿಯನ್ ಹಾದಿ ತೋರಿಸಿದರು.