IPL 2025 | ರಜತ್ ಪಾಟೀದಾರ್ RCBಯ ಹೊಸ ನಾಯಕ

Photo credit: X/@RcbianOfficial
ಬೆಂಗಳೂರು: 2025ರ ಐಪಿಎಲ್ ಸೀಸನ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನೂತನ ನಾಯಕರಾಗಿ ರಜತ್ ಪಾಟೀದಾರ್ ಆಯ್ಕೆಯಾಗಿದ್ದಾರೆ.
ಕಳೆದ ಮೂರು ಋತುಗಳಲ್ಲಿ RCB ತಂಡವನ್ನು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಆದರೆ, ಕಳೆದ ಬಾರಿಯ ಹರಾಜಿಗೂ ಮುನ್ನವೇ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಹೀಗಾಗಿ ತಂಡದ ನಾಯಕತ್ವಕ್ಕೆ ಮತ್ತೊಮ್ಮೆ ವಿರಾಟ್ ಕೊಹ್ಲಿಯ ಹೆಸರು ಮುಂಚೂಣಿಗೆ ಬಂದಿತ್ತು. ಆದರೆ, ನಾಯಕರಾಗಲು ನಿರಾಕರಿಸಿದ್ದ ವಿರಾಟ್ ಕೊಹ್ಲಿ, ತಂಡದ ಹೊಣೆಯನ್ನು ಯುವ ಆಟಗಾರರಿಗೆ ವಹಿಸಲು ಸಲಹೆ ನೀಡಿದ್ದರು.
ಹೀಗಾಗಿ, RCB ತಂಡದ ನಾಯಕತ್ವಕ್ಕೆ ದೇಶೀಯ ಕ್ರಿಕೆಟ್ ನಲ್ಲಿ ನಾಯಕತ್ವದ ಅನುಭವ ಹೊಂದಿರುವ ರಜತ್ ಪಾಟೀದಾರ್ ಹಾಗೂ ಕೃನಾಲ್ ಪಾಂಡ್ಯರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಇಂದು ಅಂತಿಮವಾಗಿ ರಜತ್ ಪಾಟೀದಾರ್ ರನ್ನು RCB ತಂಡದ ನೂತನ ನಾಯಕರನ್ನಾಗಿ ಘೋಷಿಸಲಾಗಿದೆ.
ಬಹುಪರಾಕ್ ಹೇಳೋ ಸಮಯ ಬಂದಿದೆ, ಬೆಂಗಳೂರು!
— Royal Challengers Bengaluru (@RCBTweets) February 13, 2025
ಈಗ ಪದಗ್ರಹಣ ಮಾಡ್ತಿರೋ ನಿಮ್ಮ ತಂಡದ ಅಧಿಪತಿ, ನಾಯಕ ರಜತ್ ಮನೋಹರ್ ಪಾಟಿದಾರ್! #PlayBold #ನಮ್ಮRCB #RCBCaptain #Rajat #RajatPatidar #IPL2025 #PatidarPattabhisheka pic.twitter.com/NDf8EjIl2H