ರಣಜಿ: ತ್ರಿಪುರಾಕ್ಕೆ ಕರ್ನಾಟಕ ಕಡಿವಾಣ
ವಾಸುಕಿ ಕೌಶಿಕ್‌ಗೆ ನಾಲ್ಕು ವಿಕೆಟ್
ಅಗರ್ತಲ: ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 241 ರನ್‌ಗೆ ನಿಯಂತ್ರಿಸಿರುವ ತ್ರಿಪುರಾ ತಂಡ ಇದಕ್ಕೆ ಪ್ರತಿಯಾಗಿ 9 ವಿಕೆಟ್‌ಗಳ ನಷ್ಟಕ್ಕೆ 198 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
2ನೇ ದಿನದಾಟವಾದ ಶನಿವಾರ ಕರ್ನಾಟಕ ತಂಡ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ಮೊದಲ ಇನಿಂಗ್ಸ್‌ನಲ್ಲಿ 78.4 ಓವರ್‌ಗಳಲ್ಲಿ 241 ರನ್‌ಗೆ ಆಲೌಟಾಯಿತು.
ಮೊದಲ ಇನಿಂಗ್ಸ್ ಆರಂಭಿಸಿದ ತ್ರಿಪುರಾ ದಿನದಾಟದಂತ್ಯಕ್ಕೆ 79 ಓವರ್‌ಗಳಲ್ಲಿ 198 ರನ್‌ಗೆ 9 ವಿಕೆಟ್ ಕಳೆದುಕೊಂಡಿದ್ದು 43 ರನ್ ಹಿನ್ನಡೆಯಲ್ಲಿದೆ. ಬಿಕ್ರಮ್‌ಜಿತ್ ದೇಬ್‌ನಾಥ್(ಔಟಾಗದೆ 57 ರನ್) ಹಾಗೂ ಅಭಿಜಿತ್ ಸರ್ಕಾರ್(ಔಟಾಗದೆ 5) ಕ್ರೀಸ್ ಕಾಯ್ದುಕೊಂಡಿದ್ದಾರೆ. ತ್ರಿಪುರಾದ ಪರ ಆರಂಭಿಕ ಬ್ಯಾಟರ್ ಬಿಶಾಲ್ ಘೋಷ್ 44 ರನ್, ನಾಯಕ ವೃದ್ದಿಮಾನ್ ಸಹಾ 28 ರನ್, ಮಣಿಶಂಕರ್ 39 ರನ್ ಗಳಿಸಿದ್ದಾರೆ.
ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ವಾಸುಕಿ ಕೌಶಿಕ್(4-34)ಯಶಸ್ವಿ ಪ್ರದರ್ಶನ ನೀಡಿದರು. ವಿದ್ವತ್ ಕಾವೇರಪ್ಪ(2-38) ಹಾಗೂ ವಿ.ವೈಶಾಕ್(2-64) ತಲಾ ಎರಡು ವಿಕೆಟ್ ಪಡೆದಿದ್ದಾರೆ.