ರವೀಂದ್ರ ಜಡೇಜ ಈ ಅಪರೂಪದ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ
Photo : PTI
ಹೊಸದಿಲ್ಲಿ: ಆಲ್ರೌಂಡರ್ ರವೀಂದ್ರ ಜಡೇಜ ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ರಾಜ್ಕೋಟ್ನ ತನ್ನ ತವರು ಮೈದಾನದಲ್ಲಿ ಆಕರ್ಷಕ ಶತಕ ಗಳಿಸಿ ಮಿಂಚಿದರು.
ಔಟಾಗದೆ 110 ರನ್ ಗಳಿಸಿದ ಜಡೇಜ ದಾಖಲೆ ಪುಸ್ತಕ ಪ್ರವೇಶಿಸಿದರು. ಟೆಸ್ಟ್ ಮಾದರಿಯ ಕ್ರಿಕೆಟ್ನಲ್ಲಿ ಕಪಿಲ್ದೇವ್ ಹಾಗೂ ಆರ್.ಅಶ್ವಿನ್ ನಂತರ 3,000 ರನ್ ಹಾಗೂ 250ಕ್ಕೂ ಅಧಿಕ ವಿಕೆಟ್ಗಳನ್ನು ಪಡೆದ ಭಾರತದ ಮೂರನೇ ಆಲ್ರೌಂಡರ್ ಎನಿಸಿಕೊಂಡು ಅಪರೂಪದ ಸಾಧನೆ ಮಾಡಿದರು.
ಜಡೇಜ ಇದೀಗ 3003 ರನ್ ಹಾಗೂ 280 ವಿಕೆಟ್ ಪಡೆದಿದ್ದಾರೆ.
ಲೆಜೆಂಡರಿ ಕಪಿಲ್ದೇವ್ 131 ಟೆಸ್ಟ್ ಪಂದ್ಯಗಳಲ್ಲಿ 5,248 ರನ್ ಹಾಗೂ 434 ವಿಕೆಟ್ಗಳನ್ನು ಪಡೆದಿದ್ದಾರೆ. ಜಡೇಜರ ಸಹ ಆಟಗಾರ ಅಶ್ವಿನ್ 3,271 ರನ್ ಹಾಗೂ 499 ವಿಕೆಟ್ಗಳನ್ನು ಕಬಳಿಸಿದ್ದಾರೆ.
Next Story