ತಂದೆಗೆ ʼಸೂಪರ್ ಬೈಕ್ʼ ಉಡುಗೊರೆ ನೀಡಿದ ರಿಂಕು ಸಿಂಗ್

Photo Credit: IG/sonulefti0700
ಮುಂಬೈ: ಕ್ರಿಕೆಟಿಗ ರಿಂಕು ಸಿಂಗ್ ತನ್ನ ತಂದೆಗೆ ಸೂಪರ್ ಬೈಕೊಂದನ್ನು ಉಡುಗೊರೆ ನೀಡಿದ್ದು, ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ತನ್ನ ತಂದೆ ಖಂಚಂದ್ ಸಿಂಗ್ ಗೆ ಕವಾಸಕಿ ನಿಂಜಾ 400 ಸ್ಪೋರ್ಟ್ಸ್ ಬೈಕ್ ಅನ್ನು ಉಡುಗೊರೆ ನೀಡುವ ಮೂಲಕ ರಿಂಕು ಸಿಂಗ್ ಸುದ್ದಿಯಲ್ಲಿದ್ದಾರೆ. ಈ ಬೈಕ್ ನ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ರಿಂಕು ಸಿಂಗ್ ತಂದೆ ಈ ಬೈಕ್ ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮನೆಮನೆಗೆ ಗ್ಯಾಸ್ ವಿತರಿಸುವ ಕೆಲಸ ಮಾಡುತ್ತಿರುವ ಖಂಚಂದ್ ಸಿಂಗ್, ತಮ್ಮ ಪುತ್ರನೊಬ್ಬ ಕ್ರಿಕೆಟಿಗನಾಗಬೇಕು ಎಂದು ಆಸೆ ಪಟ್ಟಿದ್ದರು. ಆ ಆಸೆಯನ್ನು ರಿಂಕು ಸಿಂಗ್ ನೆರವೇರಿಸಿದ್ದಾರೆ. ಐಪಿಎಲ್ ನಿಂದ ಹಿಡಿದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದವರೆಗೆ ಮಿಂಚುತ್ತಿರುವ ರಿಂಕು ಸಿಂಗ್, ಸದ್ಯ ಭಾರತ ತಂಡದಲ್ಲಿನ ವಿಶ್ವಾಸಾರ್ಹ ಆಟಗಾರನಾಗಿದ್ದಾರೆ.
Next Story