ಐಪಿಎಲ್ ನಲ್ಲಿ ಶತಕ ಸಿಡಿಸಿದ 8ನೇ ನಾಯಕ ಋತುರಾಜ್ ಗಾಯಕ್ವಾಡ್
ಋತುರಾಜ್ ಗಾಯಕ್ವಾಡ್ | PC : X |@IPL
ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಇತಿಹಾಸದಲ್ಲಿ ಋತುರಾಜ್ ಗಾಯಕ್ವಾಡ್ ಶತಕ ದಾಖಲಿಸಿದ 8ನೇ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಮಂಗಳವಾರ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಗಾಯಕ್ವಾಡ್ ಶತಕ ಗಳಿಸಿದ್ದರು.
ಗಾಯಕ್ವಾಡ್ 56 ಎಸೆತಗಳಲ್ಲಿ ಶತಕ ಪೂರೈಸಿದ್ದು, ಐಪಿಎಲ್ ನಲ್ಲಿ ಶತಕ ಗಳಿಸಿದ ಸಿಎಸ್ ಕೆ ತಂಡದ ಮೊದಲ ನಾಯಕನೆಂಬ ಕೀರ್ತಿಗೆ ಭಾಜನರಾದರು.
ಈ ವೇಳೆ ಗಾಯಕ್ವಾಡ್ ಅವರು ಎಂ.ಎಸ್. ಧೋನಿಯ ದಾಖಲೆಯನ್ನು ಹಿಂದಿಕ್ಕಿದರು. ಧೋನಿ ಸಿಎಸ್ ಕೆ ನಾಯಕನಾಗಿ 84 ರನ್ ಗಳಿಸಿದ್ದರು.
ಐಪಿಎಲ್ ನಲ್ಲಿ ಶತಕ ಗಳಿಸಿದ ನಾಯಕರುಗಳು
1)ಕೆ.ಎಲ್.ರಾಹುಲ್-ಔಟಾಗದೆ 132 ರನ್(ಪಂಜಾಬ್ ಕಿಂಗ್ಸ್), ಔಟಾಗದೆ 103(ಲಕ್ನೊ ಸೂಪರ್ ಜಯಂಟ್ಸ್ ), ಔಟಾಗದೆ 103(ಲಕ್ನೊ ಸೂಪರ್ ಜಯಂಟ್ಸ್)
2)ಡೇವಿಡ್ ವಾರ್ನರ್-126(ಸನ್ರೈಸರ್ಸ್ ಹೈದರಾಬಾದ್)
3)ವೀರೇಂದ್ರ ಸೆಹ್ವಾಗ್-119(ಡೆಲ್ಲಿ ಕ್ಯಾಪಿಟಲ್ಸ್ )
4)ಸಂಜು ಸ್ಯಾಮ್ಸನ್-119(ರಾಜಸ್ಥಾನ ರಾಯಲ್ಸ್)
5)ವಿರಾಟ್ ಕೊಹ್ಲಿ-113, 109, ಔಟಾಗದೆ 108, ಔಟಾಗದೆ 100, 100(ಆರ್ಸಿಬಿ)
6)ಆಡಮ್ ಗಿಲ್ಕ್ರಿಸ್ಟ್-106(ಪಂಜಾಬ್ ಕಿಂಗ್ಸ್)
7)ಸಚಿನ್ ತೆಂಡುಲ್ಕರ್-ಔಟಾಗದೆ 100(ಮುಂಬೈ ಇಂಡಿಯನ್ಸ್)
8) ಋತುರಾಜ್ ಗಾಯಕ್ವಾಡ್-ಔಟಾಗದೆ 108(ಚೆನ್ನೈ ಸೂಪರ್ ಕಿಂಗ್ಸ್)