ನಾಯಕತ್ವ ಕಳೆದುಕೊಂಡ ರೋಹಿತ್, ಮುಂಬೈ ಅಭಿಮಾನಿಗಳ ಆಕ್ರೋಶ
ರೋಹಿತ್ ಶರ್ಮಾ | Photo: PTI
ಹೊಸದಿಲ್ಲಿ: ರೋಹಿತ್ ಶರ್ಮಾರನ್ನು ಶುಕ್ರವಾರ ನಾಯಕತ್ವದಿಂದ ಕೆಳಗಿಳಿಸಿರುವ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯರನ್ನು 2024ರ ಐಪಿಎಲ್ ಗೆ ತಂಡದ ನೂತನ ನಾಯಕನನ್ನಾಗಿ ನೇಮಿಸಿದೆ.
ರೋಹಿತ್ ರನ್ನು ನಾಯಕತ್ವದಿಂದ ಕೆಳಗಿಳಿಸಿರುವ ನಿರ್ಧಾರವು ಮುಂಬೈ ತಂಡದ ಅಭಿಮಾನಿಗಳಿಗೆ ಆಘಾತವುಂಟು ಮಾಡಿದ್ದು, ಹಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಹಿತ್ 2011ರಿಂದ ಮುಂಬೈ ಇಂಡಿಯನ್ಸ್ ನಲ್ಲಿ ಆಡುತ್ತಿದ್ದಾರೆ. 2013ರಲ್ಲಿ ನಾಯಕನಾಗಿ ನೇಮಕಗೊಂಡಿದ್ದರು. ಹಾರ್ದಿಕ್ 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸುವ ಮೊದಲು ಮುಂಬೈ ತಂಡದಲ್ಲಿ ರೋಹಿತ್ ನಾಯಕತ್ವದಡಿ ಆಡಿದ್ದರು. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿತ್ತು. ರೋಹಿತ್ ಚೆನ್ನೈ ಸೂಪರ್ ಕಿಂಗ್ಸ್ ನ ಐಕಾನ್ ಎಂ.ಎಸ್ ಧೋನಿಯ ಅವರೊಂದಿಗೆ ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
ಕೆಲವು ಅಭಿಮಾನಿಗಳು ಧ್ವಜಗಳನ್ನು ಸುಟ್ಟುಹಾಕಿದ್ದು, ಮುಂಬೈ ಬ್ಯಾಟರ್ ಸೂರ್ಯಕುಮಾರ್ ಹೃದಯ ಚೂರಾದ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.