ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 2ನೇ ಆಟಗಾರ ರೋಹಿತ್ ಶರ್ಮಾ

ರೋಹಿತ್ ಶರ್ಮಾ | PTI
ಹೊಸದಿಲ್ಲಿ: ಭಾರತದ ನಾಯಕ ರೋಹಿತ್ ಶರ್ಮಾ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಎರಡನೇ ಆಟಗಾರನಾಗಿ ಹೊರಹೊಮ್ಮಿದರು. ಇಂಗ್ಲೆಂಡ್ ವಿರುದ್ಧ ಕಟಕ್ನಲ್ಲಿ ರವಿವಾರ ನಡೆದ 2ನೇ ಏಕದಿನ ಪಂದ್ಯದ ವೇಳೆ ರೋಹಿತ್ ಈ ಸಾಧನೆ ಮಾಡಿದರು.
ಈ ಪಂದ್ಯಕ್ಕಿಂತ ಮೊದಲು 331 ಸಿಕ್ಸರ್ಗಳೊಂದಿಗೆ ಕ್ರಿಸ್ ಗೇಲ್ರೊಂದಿಗೆ ಸಮಬಲ ಸಾಧಿಸಿದ್ದ ರೋಹಿತ್ ಭಾರತದ ರನ್ ಚೇಸ್ ವೇಳೆ 2ನೇ ಓವರ್ನಲ್ಲಿ ಅಟ್ಕಿನ್ಸನ್ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸಿ ವೆಸ್ಟ್ಇಂಡೀಸ್ನ ಆರಂಭಿಕ ಆಟಗಾರನನ್ನು ಹಿಂದಿಕ್ಕಿದರು.
ಶಾಹಿದ್ ಅಫ್ರಿದಿ ಏಕದಿನ ಕ್ರಿಕೆಟ್ನಲ್ಲಿ ಸದ್ಯ ಗರಿಷ್ಠ ಸಿಕ್ಸರ್ ಹಿಟ್ಟರ್ ಆಗಿದ್ದಾರೆ. ಅಫ್ರಿದಿ ಏಕದಿನ ಕ್ರಿಕೆಟ್ನಲ್ಲಿ 398 ಇನಿಂಗ್ಸ್ಗಳಲ್ಲಿ 351 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ರೋಹಿತ್ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದಾರೆ. ರೋಹಿತ್ ಅವರು ಟಿ20, ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 624 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಸಿಕ್ಸರ್ ಹಿಟ್ಟರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ 151 ಇನಿಂಗ್ಸ್ಗಳಲ್ಲಿ 205 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
►ಪುರುಷರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ಗಳು
1.ಶಾಹಿದ್ ಅಫ್ರಿದಿ(ಪಾಕಿಸ್ತಾನ): 369 ಇನಿಂಗ್ಸ್ಗಳಲ್ಲಿ 351 ಸಿಕ್ಸರ್ಗಳು
2. ರೋಹಿತ್ ಶರ್ಮಾ(ಭಾರತ)-259 ಇನಿಂಗ್ಸ್ಗಳಲ್ಲಿ 332 ಸಿಕ್ಸರ್ಗಳು
3. ಕ್ರಿಸ್ ಗೇಲ್(ವೆಸ್ಟ್ಇಂಡೀಸ್)-294 ಇನಿಂಗ್ಸ್ಗಳಲ್ಲಿ 331 ಸಿಕ್ಸರ್ಗಳು
4. ಸನತ್ ಜಯಸೂರ್ಯ(ಶ್ರೀಲಂಕಾ)-433 ಇನಿಂಗ್ಸ್ಗಳಲ್ಲಿ 270 ಸಿಕ್ಸರ್ಗಳು
5. ಎಂ.ಎಸ್. ಧೋನಿ(ಭಾರತ)-297 ಇನಿಂಗ್ಸ್ಗಳಲ್ಲಿ 229 ಸಿಕ್ಸರ್ಗಳು