ಏಕದಿನ ಕ್ರಿಕೆಟ್: 9 ಸಾವಿರ ರನ್ ಪೂರೈಸಿದ ಆರನೇ ಆರಂಭಿಕ ಬ್ಯಾಟರ್ ರೋಹಿತ್

ರೋಹಿತ್ ಶರ್ಮಾ | PC : PTI
ದುಬೈ: ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ರವಿವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ ಏಕದಿನ ಕ್ರಿಕೆಟ್ನಲ್ಲಿ 9,000 ರನ್ ಪೂರೈಸಿದರು.
ಈ ಸಾಧನೆಯ ಮೂಲಕ ರೋಹಿತ್ ಅವರು 9,000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿರುವ ಇಬ್ಬರು ಭಾರತೀಯರಾದ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ ಸಹಿತ ಆರು ಆರಂಭಿಕ ಆಟಗಾರರ ಎಲೈಟ್ ಪಟ್ಟಿಗೆ ಸೇರಿದ್ದಾರೆ.
ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕಿಂತ ಮೊದಲು ರೋಹಿತ್ಗೆ ಈ ಸಾಧನೆ ಮಾಡಲು ಕೇವಲ ಒಂದು ರನ್ ಅಗತ್ಯವಿತ್ತು.
ಬಾಂಗ್ಲಾದೇಶ ವಿರುದ್ಧದ ಹಿಂದಿನ ಪಂದ್ಯದಲ್ಲಿ ರೋಹಿತ್ ಅವರು ಏಕದಿನ ಕ್ರಿಕೆಟ್ನಲ್ಲಿ 11,000 ರನ್ ಪೂರೈಸಿದ್ದರು. ವಿರಾಟ್ ಕೊಹ್ಲಿ ನಂತರ ವೇಗವಾಗಿ ಈ ಮೈಲಿಗಲ್ಲು ತಲುಪಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದರು.
*ಏಕದಿನ ಕ್ರಿಕೆಟ್ನಲ್ಲಿ 9,000 ರನ್ ಗಳಿಸಿದ ಆರಂಭಿಕ ಆಟಗಾರರು
1)ಸಚಿನ್ ತೆಂಡುಲ್ಕರ್-340 ಇನಿಂಗ್ಸ್ಗಳಲ್ಲಿ 15,310 ರನ್
2) ಸನತ್ ಜಯಸೂರ್ಯ-383 ಇನಿಂಗ್ಸ್ಗಳಲ್ಲಿ 12,740 ರನ್
3) ಕ್ರಿಸ್ ಗೇಲ್-274 ಇನಿಂಗ್ಸ್ಗಳಲ್ಲಿ 10,179 ರನ್
4)ಆಡಮ್ ಗಿಲ್ಕ್ರಿಸ್ಟ್-259 ಇನಿಂಗ್ಸ್ಗಳಲ್ಲಿ 9,200 ರನ್
5)ಸೌರವ್ ಗಂಗುಲಿ-236 ಇನಿಂಗ್ಸ್ಗಳಲ್ಲಿ 9,146 ರನ್
6) ರೋಹಿತ್ ಶರ್ಮಾ-181 ಇನಿಂಗ್ಸ್ಗಳಲ್ಲಿ 9,000 ರನ್