ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿದ ರೋಹಿತ್ ಶರ್ಮಾ
ಏಕದಿನ ವಿಶ್ವಕಪ್ ನಲ್ಲಿ 51 ಸಿಕ್ಸರ್ ಬಾರಿಸಿದ ಮೊದಲ ಆಟಗಾರ
ರೋಹಿತ್ ಶರ್ಮಾ \ Photo: PTI
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕ್ರಿಸ್ ಗೇಲ್ ಅತೀ ಹೆಚ್ಚು ಸಿಕ್ಸರ್ ದಾಖಲೆ ಮುರಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ವಿಶ್ವಕಪ್ ನಲ್ಲಿ 51 ಸಿಕ್ಸರ್ ಗಳ ಸಾಧನೆ ಮಾಡಿದರು.
ಕಿವೀಸ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಸ್ಟೋಟಕ ಆಟ ಪ್ರದರ್ಶಿಸಿದ್ದ ರೋಹಿತ್ ಶರ್ಮಾ 4 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ 47 ರನ್ ಬಾರಿಸಿದ್ದರು. ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಏಕದಿನ ವಿಶ್ವಕಪ್ 49 ಸಿಕ್ಸರ್ ದಾಖಲೆ ಮುರಿದ ರೋಹಿತ್ ಶರ್ಮಾ 51 ಸಿಕ್ಸರ್ ಬಾರಿಸುವುದರೊಂದಿಗೆ ಏಕದಿನ ವಿಶ್ವಕಪ್ ನಲ್ಲಿ ಅತೀ ಹಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು.
ಅತೀ ಹೆಚ್ಚು ಸಿಕ್ಸರ್ ದಾಖಲೆಗಳು :
ರೋಹಿತ್ ಶರ್ಮಾ 51
ಕ್ರಿಸ್ ಗೇಲ್ 49
ಗ್ಲೆನ್ ಮಾಕ್ಸ್ ವೆಲ್ 43
ಎಬಿ ಡೆವಿಲಿಯರ್ಸ್ 37
ಡೇವಿಡ್ ವಾರ್ನರ್ 37
ವಿಶ್ವಕಪ್ 2023 ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಟ್ಟಾರೆ 28 ಸಿಕ್ಸರ್ ಬಾರಿಸಿ ಒಂದೇ ಆವೃತ್ತಿಯಲ್ಲಿ ಹೆಚ್ಚು ಸಿಕ್ಸರ್ ದಾಖಲೆ ಕೂಡ ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಕ್ರಿಸ್ ಗೇಲ್ 2015 ರ ವಿಶ್ವಕಪ್ ನಲ್ಲಿ 26 ಸಿಕ್ಸರ್ ಸಿಡಿಸಿದ್ದರು