ಟೆಸ್ಟ್ ಕ್ರಿಕೆಟ್ನಲ್ಲಿ 4,000 ರನ್ ಪೂರೈಸಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ(Photo: PTI)
ರಾಂಚಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ 192 ರನ್ ಚೇಸ್ ವೇಳೆ ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ 4,000 ರನ್ ಪೂರೈಸಿದ ಸಾಧನೆ ಮಾಡಿದರು.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ರೋಹಿತ್ ಕೇವಲ 2 ರನ್ ಗಳಿಸಿ ಔಟಾಗಿದ್ದರು. ಈಗ ನಡೆಯುತ್ತಿರುವ 2ನೇ ಇನಿಂಗ್ಸ್ನಲ್ಲಿ ಔಟಾಗದೆ 24 ರನ್ ಗಳಿಸಿದ್ದಾರೆ.
ಪ್ರಸಕ್ತ ಸರಣಿಯಲ್ಲಿ ರೋಹಿತ್ ತನ್ನ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾಗುತ್ತಿದ್ದಾರೆ. 4 ಪಂದ್ಯಗಳಲ್ಲಿ ರೋಹಿತ್ 38ರ ಸರಾಸರಿಯಲ್ಲಿ ಒಟ್ಟು 266 ರನ್ ಗಳಿಸಿದ್ದರು. ಇದರಲ್ಲಿ ಒಂದು ಶತಕ(ರಾಜ್ಕೋಟ್ ಟೆಸ್ಟ್ನಲ್ಲಿ 131 ರನ್)ಇದೆ.
58 ಟೆಸ್ಟ್ ಪಂದ್ಯಗಳನ್ನು ಆಡಿರುವ ರೋಹಿತ್ 44.98ರ ಸರಾಸರಿಯಲ್ಲಿ ಒಟ್ಟು 4,003 ರನ್ ಗಳಿಸಿದ್ದಾರೆ. 212 ರನ್ ಗರಿಷ್ಠ ಸ್ಕೋರಾಗಿದೆ. 100 ಇನಿಂಗ್ಸ್ಗಳಲ್ಲಿ ಅವರು 11 ಶತಕ ಹಾಗೂ 16 ಅರ್ಧಶತಕಗಳನ್ನು ಗಳಿಸಿದ್ದಾರೆ.
Next Story