ಹಳಿಗೆ ಮರಳಿದ ರೋʼಹಿಟ್ʼ ಶರ್ಮಾ, ಆಕರ್ಷಕ ಶತಕ
ಏಕದಿನ ವಿಶ್ವಕಪ್ ಬಳಿಕ ಶತಕದ ದಾಖಲೆ

PC | X@BCCI
ಕಟಕ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮೂಲಕ ಶತಕ ದಾಖಲಿಸಿದರು.
ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕಟಕ್ ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತಕ್ಕೆ ಇಂಗ್ಲೆಂಡ್ 304 ರನ್ ಗಳ ಗುರಿ ನೀಡಿತು.
ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮ ಹಾಗೂ ಶುಭನ್ ಗಿಲ್ ಉತ್ತಮ ಪ್ರದರ್ಶನ ನೀಡಿದರು. ಕ್ರೀಡಾಂಗಣದಲ್ಲಿ ಫ್ಲಡ್ ಲೈಟ್ಗಳು ಸ್ಥಗಿತಗೊಂಡ ಕಾರಣ ಕೆಲಕಾಲ ಆಟವನ್ನು ನಿಲ್ಲಿಸಲಾಗಿತ್ತು.
ಪುನಃ ಬ್ಯಾಟಿಂಗ್ ಮಾಡಿದ ರೋಹಿತ್ 76 ಎಸೆತಗಳಲ್ಲಿ 7 ಸಿಕ್ಸರ್, 9 ಬೌಂಡರಿ ನೆರವಿನಿಂದ ಶತಕ ಪೂರೈಸಿದರು. 2ನೇ ಕ್ರಮಾಂಕದ ಆಟಗಾರ ಶುಭನ್ ಗಿಲ್ 52 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್ ಜೊತೆಗೆ 60 ರನ್ ಗಳಿಸಿ ಔಟ್ ಆದರು.
ಇಂಗ್ಲೆಂಡ್ ನೀಡಿರುವ 304 ರನ್ ಗುರಿ ಬೆನ್ನತ್ತಿರುವ ಭಾರತಕ್ಕೆ 24.3 ಓವರ್ ಗಳಲ್ಲಿ 119 ರನ್ ಗಳ ಅವ್ಯಶಕತೆಯಿದೆ.
Next Story